ಹುಬ್ಬಳ್ಳಿ: ಆಕೆ ಇನ್ನೂ ಕಾಲೇಜು ಕಲೆಯುವ ಯುವತಿ.ಕಾಲೇಜು ಕಲೆಯುವಾಗಲೇ ತನ್ನ ಪ್ರತಿಭೆಯನ್ನು ದೇಶಾದ್ಯಂತ ಪಸರಿಸಲು ಸಿದ್ಧವಾಗಿದ್ದಾಳೆ.ಚಿಕ್ಕ ವಯಸ್ಸಿನ ಈ ಯುವತಿಯ ಕಾರ್ಯ ನೋಡಿದರೇ ನೀವು ಕೂಡ ಬೆರಗಾಗುವುದಂತೂ ಕಂಡಿತ.ಅಷ್ಟಕ್ಕೂ ಯಾರು ಆ ಯುವತಿ ಅಂತೀರಾ ಈ ಸ್ಟೋರಿ..
ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರೀತಿ ಗಾಯಕವಾಡ ಎಂಬುವ ಯುವತಿ ತನ್ನ ಅಭಿನಯದ ಮೂಲಕ ತೆಲುಗು ಹಾಗೂ ತಮಿಳ ಚಿತ್ರದಲ್ಲಿ ಅಭಿನಯಿಸಿದ್ದಾಳೆ.ಅಷ್ಟೇ ಅಲ್ಲದೆ ಇನ್ನೂ ಹೆಸರಿಡದ ತಮಿಳು ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವುದು ನಿಜಕ್ಕೂ ಸಂತಸದ ಸಂಗತಿಯಾಗಿದೆ.ತನ್ನ ಕಲಾ ಚತುರತೆಯ ಮೂಲಕ ರಾಜ್ಯದ ಆಚೆಗೂ ಕೂಡ ತನ್ನ ಕೀರ್ತಿಯನ್ನು ಚಾಚಿದ್ದಾರೆ.
ತಂದೆ ಅಣ್ಣಪ್ಪ ತಾಯಿ ಶೋಭಾ ಅವರ ಮಗಳಾಗಿ ಜನಿಸಿದ ಪ್ರೀತಿ ಗಾಯಕವಾಡ ಅವರು ಹುಬ್ಬಳ್ಳಿಯ ಗ್ಲೋಬಲ್ ಕಾಲೇಜಿನಲ್ಲಿ ಬಿ.ಕಾಂ ಪೈನಲ್ ಇಯರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದು,ತಮಿಳು,ತೆಲುಗು, ಕನ್ನಡ ಭಾಷೆಯಲ್ಲಿ ಅಭಿನಯಿಸಿದ್ದಾರೆ.ಹುಬ್ಬಳ್ಳಿಯ ಪ್ರತಿಭೆ ಈಗ ಮಾತೃ ಭಾಷೆಯಲ್ಲದೇ ತೆಲುಗು ತಮಿಳು ಚಿತ್ರದಲ್ಲಿ ಅಭಿನಯಿಸಿರುವುದು ವಿಶೇಷವಾಗಿದೆ.ಶಾಲಾ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಪ್ರೀತಿ ಅವರು ಮಾಡೆಲಿಂಗ್ ಆಗಿ ಡ್ಯಾನ್ಸರ್ ಆಗಿ ಕೂಡ ಸಾಕಷ್ಟು ಅನುಭವ ಪಡೆದಿರುವ ಕಿರಿಯ ವಯಸ್ಸಿನ ಪ್ರತಿಭೆ ಈಗ ತಮಿಳು ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಏನು ಕೂಡ ಕೊರತೆಯಿಲ್ಲ ಎಂಬುವಂತ ಮಾತಿಗೆ ನಿದರ್ಶನ ಎಂಬಂತೆ ಪ್ರೀತಿ ಅತ್ಯುತ್ತಮ ರೀತಿಯಲ್ಲಿ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.ಹಿರಿಯ ತಾರೆಗಳಂತೆ ಬಹು ಭಾಷೆ ನಟಿಯಾಗಿ ಅಭಿನಯಿಸುತ್ತಿರುವುದು ನಮ್ಮ ಹುಬ್ಬಳ್ಳಿ ಕೀರ್ತಿಯನ್ನು ಇಮ್ಮಡಿಗೊಳಿಸಿದೆ.ಇಂತಹ ಪ್ರತಿಭೆಗಳಿಗೆ ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ಅವಕಾಶಗಳು ಒದಗಿ ಬರಲಿ ಎಂಬುವುದು ನಮ್ಮ ಆಶಯವಾಗಿದೆ.
Kshetra Samachara
01/03/2021 08:25 am