ಧಾರವಾಡ: ದಸರಾ ಉತ್ಸವದ ಅಂಗವಾಗಿ ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲೊನಿಯಲ್ಲಿರುವ ಶಂಕರ ಮಠದಲ್ಲಿ ಶ್ರೀ ಸಾಯಿ ಪದವಿಪೂರ್ವ ವಿಜ್ಞಾನ, ವಾಣಿಜ್ಯ ಕಾಲೇಜು, ರ್‍ಯಾಪಿಡ್ ಸಂಸ್ಥೆ ಹಾಗೂ ಯಶೋಧ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಮಹಿಳಾ ಉದ್ಯೋಗಿಗಳಿಗೆ ಮಾರುಕಟ್ಟೆ ಸೌಲಭ್ಯ ಹಾಗೂ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಈ ಮೂರೂ ಸಂಸ್ಥೆಗಳು ಒದಗಿಸಿಕೊಟ್ಟಿದ್ದ ಮಾರುಕಟ್ಟೆಗೆ ಬಂದಿದ್ದ ಮಹಿಳಾ ಸ್ವ ಉದ್ಯೋಗಿಗಳು ತಾವೇ ಮನೆಯಲ್ಲಿ ಸಿದ್ಧಪಡಿಸಿದ ಬ್ಯಾಗ್, ಮಣ್ಣಿನ ಕಲಾಕೃತಿಗಳು, ಹಪ್ಪಳ, ಸಂಡಿಗೆ ಸೇರಿದಂತೆ ಇತರ ಗೃಹಪಯೋಗಿ ವಸ್ತುಗಳನ್ನು ಮಾರಾಟಕ್ಕೆ ತಂದಿದ್ದರು. ಇದಕ್ಕೂ ಮುನ್ನ ದಸರಾ ಉತ್ಸವದ ಅಂಗವಾಗಿ ರಂಗೋಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಅನೇಕರು ರಂಗೋಲಿ ಬಿಡಿಸಿ ತಮ್ಮ ಕಲೆಯನ್ನು ಪ್ರದರ್ಶಿಸಿದರು. ಇದರಲ್ಲಿ ಅತ್ಯಂತ ಸುಂದರವಾಗಿ ರಂಗೋಲಿ ಬಿಡಿಸಿದವರಿಗೆ ಬಹುಮಾನ ನೀಡಲಾಯಿತು. ನಂತರ ಜಾನಪದ ಹಾಡುಗಾರಿಕೆ ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು.
ದಸರಾ ಉತ್ಸವದ ಅಂಗವಾಗಿ ಮೂರು ಸಂಸ್ಥೆಗಳು ಆಯೋಜಿಸಿದ್ದ ಈ ಮಾರುಕಟ್ಟೆ ಸೌಲಭ್ಯವನ್ನು ಅಚ್ಚುಕಟ್ಟಾಗಿ ಬಳಕೆ ಮಾಡಿಕೊಂಡ ಮಹಿಳಾ ಸ್ವ ಉದ್ಯೋಗಿಗಳು ವ್ಯಾಪಾರ ವಹಿವಾಟು ನಡೆಸಿದರು. ಇನ್ನು ಅನೇಕರು ರಂಗೋಲಿ ಬಿಡಿಸಿ ದಸರಾಗೆ ಈಗಿನಿಂದಲೇ ಮೆರಗು ತಂದುಕೊಟ್ಟರು.
Kshetra Samachara
23/09/2022 10:01 pm