ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಹಿಳೆಯರ ಕನಸಿನ ಸಾಕಾರಕ್ಕೆ ಸಾಕ್ಷಿಯಾದ ಕೌಶಲ್ಯ ಪ್ರದರ್ಶನ; ತೊಟ್ಟಿಲು ತೂಗುವ ಕೈ ಕಲೆಯ ಮೇರು ಶಿಖರ!

ಹುಬ್ಬಳ್ಳಿ: ಎಲ್ಲೆಡೆಯೂ ರಂಗು ರಂಗಿನ ಚಿತ್ತಾರದ ಕಲಾಕೃತಿಗಳು... ‌ನೋಡುಗರನ್ನು ಕ್ಷಣಕಾಲ ಮಂತ್ರಮುಗ್ಧರನ್ನಾಗಿ ಮಾಡುವ ವೈಶಿಷ್ಟ್ಯ ಪೂರ್ಣ ಕೌಶಲ್ಯಗಳು... ಕಣ್ಣು ಹಾಯಿಸಿದಷ್ಟು ದೂರ ಮನಕ್ಕೆ ಖುಷಿ ನೀಡುವ ವೇದಿಕೆಗೆ ಸಾಕ್ಷಿಯಾಗಿದ್ದು, ಟೈ- ಹುಬ್ಬಳ್ಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೌಶಲ್ಯ-2022 ಬೃಹತ್ ಪ್ರದರ್ಶನ.

ಹೌದು... "ತೊಟ್ಟಿಲು ತೂಗುವ ಕೈ ದೇಶವನ್ನೂ ಆಳಬಲ್ಲದು" ಎಂಬುವಂತ ಧ್ಯೇಯೋದ್ದೇಶವನ್ನು ಘೋಷ ವಾಕ್ಯವನ್ನಾಗಿ ಮಾಡಿಕೊಂಡಿರುವ ಟೈ-ಹುಬ್ಬಳ್ಳಿ ಈಗ ಮಹಿಳಾ ಸಬಲೀಕರಣ ಕನಸನ್ನು ಹೊತ್ತು ಮುನ್ನಡೆಯಲು ಚಿಂತನೆ ನಡೆಸಿರುವ ಟೈ-ಹುಬ್ಬಳ್ಳಿಯ ಅಭಿಯಾನಕ್ಕೆ ‌ನಿಮ್ಮ ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಕೂಡ ಕೈ ಜೋಡಿಸಿದೆ.

ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಸದುದ್ದೇಶದಿಂದ ಟೈ ಹುಬ್ಬಳ್ಳಿಯ ವತಿಯಿಂದ ಕೌಶಲ್ಯ-2022 ಬೃಹತ್ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ನೂರಾರು ಬಗೆಯ ಕಲಾಕೃತಿಗಳು, ಶುಚಿರುಚಿಯಾದ ಖಾದ್ಯಗಳು, ಕರಕುಶಲ ಹಾಗೂ ಗೃಹ ಬಳಕೆಯ ವಸ್ತುಗಳು ಮಹಿಳೆಯರ ಕಲೆಯ ಅಭಿರುಚಿಯನ್ನು ಪ್ರಸ್ತುತ ಪಡಿಸಲು ಸಾಕ್ಷಿಯಾದವು. 2ನೇ ದಿನವಾದ ಇಂದು ಸಾಕಷ್ಟು ಸಂಖ್ಯೆಯಲ್ಲಿ ಮಹಿಳಾ ಉದ್ಯಮಿಗಳು ಆಗಮಿಸಿದ್ದು, ಮಹಿಳಾ ಉದ್ಯಮಿಗಳ ಪ್ರೋತ್ಸಾಹದ ಕನಸಿಗೆ ದೊಡ್ಡಮಟ್ಟದ ಬೆಂಬಲ ದೊರೆತಂತಾಗಿದೆ.

ಟೈ ಹುಬ್ಬಳ್ಳಿಯ ಮಹಿಳಾ ವಿಭಾಗವು ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಹಾಗೂ ಮುಂಬರುವ ಹಬ್ಬದ ಋತುವಿನಲ್ಲಿ ಶಾಪಿಂಗ್ ಅನುಭವ ಸೃಷ್ಟಿಸಲು ಹುಬ್ಬಳ್ಳಿ ಗೋಕುಲ ರಸ್ತೆಯ ಹೆಬಸೂರು ಭವನದಲ್ಲಿ ಆಯೋಜಿಸಲಾಗಿದ್ದು, ಮಹಿಳಾ ಕೌಶಲ್ಯದ ದೂರದೃಷ್ಟಿಯಿಂದ ಇಂತಹದೊಂದು ಕಾರ್ಯಕ್ರಮ ಆಯೋಜಿಸಿದ್ದು, ಸಾಕಷ್ಟು ಬೆಂಬಲ ವ್ಯಕ್ತವಾಗಿದೆ.

ಒಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಮಹಿಳಾ ಪ್ರತಿಭೆಗಳು ಪೂರಕ ವೇದಿಕೆಯಿಲ್ಲದೇ ತಮ್ಮ ಪ್ರತಿಭೆಗಳ ಅನಾವರಣಕ್ಕೆ ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ಮಹಿಳಾ ಸಬಲೀಕರಣದ ಜೊತೆಗೆ ಮಹಿಳೆಯರ ಕೌಶಲ್ಯ ಅನಾವರಣಗೊಳಿಸುವ ಮಹತ್ವದ ಕಾರ್ಯಕ್ರಮ ಇದಾಗಿದೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/09/2022 07:12 pm

Cinque Terre

84.26 K

Cinque Terre

2

ಸಂಬಂಧಿತ ಸುದ್ದಿ