ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅದ್ಧೂರಿಯಾಗಿ ನಡೆಯುತ್ತಿದೆ ಟೈ-ಹುಬ್ಬಳ್ಳಿ ಕೌಶಲ್ಯ-2022 ಬೃಹತ್ ವಸ್ತು ಪ್ರದರ್ಶನ

ಹುಬ್ಬಳ್ಳಿ: ಆಕರ್ಷಕ ಉಡುಪುಗಳು, ಬಗೆ ಬಗೆ ಸಾರಿಗಳು, ಮನೆ ಬಳಕೆ ವಸ್ತುಗಳು, ಸಿಹಿ ಖಾರ ತಿಂಡಿಗಳು, ಸಿರಿಧಾನ್ಯ ಹೀಗೆ ಹಲವಾರು ಮಳಗಿಗಳ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದು, ಟೈ ಹುಬ್ಬಳ್ಳಿ ಕೌಶಲ್ಯ-2022 ವಸ್ತು ಪ್ರದರ್ಶನ..

ಹುಬ್ಬಳ್ಳಿ ಧಾರವಾಡ ಸೇರಿದಂತೆ ಇಡೀ ರಾಜ್ಯದಲ್ಲೇ ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಹೆಸರನ್ನು ಮಾಡುತ್ತಿರುವ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದ ಸಹಯೋಗದೊಂದಿಗೆ, ಮಹಿಳಾ ಸಬಲೀಕರಣದ ಜೊತೆಗೆ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಸದುದ್ದೇಶದಿಂದ ಟೈ ಹುಬ್ಬಳ್ಳಿಯ ವತಿಯಿಂದ ಕೌಶಲ್ಯ-2022 ಬೃಹತ್ ವಸ್ತು ಪ್ರದರ್ಶನವನ್ನು ನಗರದ ಹೆಬಸೂರ ಭವನದಲ್ಲಿ ಇಂದು ಮತ್ತು ನಾಳೆ ಹಮ್ಮಿಕೊಳ್ಳಲಾಗಿದೆ.

ಟೈ ಹುಬ್ಬಳ್ಳಿಯ ಮಹಿಳಾ ವಿಭಾಗ ಮಹಿಳೆಯರನ್ನು ಉದ್ಯಮಿಯಲ್ಲಿ ಪ್ರೋತ್ಸಾಹಿಸಲು ನಿಟ್ಟಿನಲ್ಲಿ ಕೌಶಲ್ಯ-2022 ಬೃಹತ್ ವಸ್ತು ಪ್ರದರ್ಶನವನ್ನು ಹಮ್ಮಿಕೊಂಡಿದೆ. ಇಲ್ಲಿ ಕಲರ್ ಕಲರ್ ಉಡುಪುಗಳು, ಡಿಸೈನ್ ಡಿಸೈನ್ ಸಾರಿಸ್, ಮನೆ ಬಳಕೆಯ ವಸ್ತುಗಳು, ಕಿವಿ ಓಲೆ, ಸಿರಿ ಧಾನ್ಯ, ಸಿಹಿ ಖಾರ ತಿಂಡಿಗಳು ಹೀಗೆ ವಿಭಿನ್ನವಾಗಿ ಮಳಿಗೆಗಳನ್ನು ಸ್ಥಾಪಿಸಿ ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಇಟ್ಟಿದ್ದಾರೆ. ಈಗಾಗಲೇ ಸಾವಿರಾರು ಸಾರ್ವಜನಿಕರು ಕೌಶಲ್ಯ -2022 ಪ್ರದೇಶನಕ್ಕೆ ಭೇಟಿ ನೀಡುತ್ತಿದ್ದಾರೆ.

ಇನ್ನು ಟೈ ಹುಬ್ಬಳ್ಳಿ ವತಿಯಿಂದ ಹಮ್ಮಿಕೊಂಡಿದ್ದ ಕೌಶಲ್ಯ -2022 ಪ್ರದರ್ಶನದಲ್ಲಿ ಸುಮಾರು 50 ಮಳಿಗೆಗಳನ್ನು ನಿಯೋಜನೆ ಮಾಡಿದ್ದಾರೆ. ಇಲ್ಲಿ ಬಗೆ ಬಗೆ ವಸ್ತುಗಳನ್ನು ಪ್ರದರ್ಶನ ಮಾಡುತ್ತಿದ್ದಾರೆ. ಮಹಿಳಾ ಉದ್ಯಮಿಗಳಿಗೆ ಇಲ್ಲಿ ಅವಕಾಶ ನೀಡಿದ ಟೈ ಮಹಿಳಾ ವಿಭಾಗಕ್ಕೆ ಉದ್ಯಮಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಒಟ್ಟಿನಲ್ಲಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸಹಯೋಗದೊಂದಿಗೆ ಟೈ ಹುಬ್ಬಳ್ಳಿ ಮಹಿಳಾ ವಿಭಾಗವು ಕೌಶಲ್ಯ-2022 ನಿಯೋಜನೆ ಮಾಡಿದ್ದಿರಿಂದ ಸಾಕಷ್ಟು ಮಹಿಳಾ ಉದ್ಯಮಿಗಳನ್ನು ಗುರುತಿಸುವಂತಾಗಿದೆ. ಮತ್ತೆ ಕೆ ತಡ ಎಲ್ಲರು ಒಂದು ಸಾರಿ ಗೋಕುಲ್ ರಸ್ತೆಯಲ್ಲಿರುವ ಹೆಬಸೂರ ಭವನದಲ್ಲಿ ಬಗೆ ಬಗೆ ವಸ್ತು ಪ್ರದರ್ಶನ ನಡೆಯುತ್ತಿದೆ ಬಂದು ಭೇಟಿ ನೀಡಿ....

Edited By : Manjunath H D
Kshetra Samachara

Kshetra Samachara

16/09/2022 05:58 pm

Cinque Terre

43.59 K

Cinque Terre

1

ಸಂಬಂಧಿತ ಸುದ್ದಿ