ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಡಲ ತೀರದ ಊಟದ ಸೌಭಾಗ್ಯ ಹುಬ್ಬಳ್ಳಿಯಲ್ಲಿ: ವಿನೂತನ ಆರಂಭದಲ್ಲಿ ಓನ್ಲಿ ಫಿಶ್

ಹುಬ್ಬಳ್ಳಿ: ಮಾತು ಬಲ್ಲವನಿಗೆ ಜಗಳವಿಲ್ಲ. ಊಟ ಬಲ್ಲವನಿಗೆ ರೋಗ ಇಲ್ಲ ಎಂಬುವಂತ ಮಾತು ಅಕ್ಷರಶಃ ಸತ್ಯ. ಹಾಗೆಯೇ ಪ್ರತಿಯೊಬ್ಬರಿಗೂ ತಮ್ಮದೇ ಆದ ಊಟದ ಅಭಿರುಚಿ ಇರುತ್ತದೆ. ಇನ್ನೂ ಮೀನು ಪ್ರೀಯರಂತೂ ಸಮುದ್ರ ತೀರದಲ್ಲಿ ಹೋಗಿ ಊಟ ಮಾಡಬೇಕು ಅಲ್ಲಿ ಮೀನು ಊಟದ ರುಚಿ ನಿಜಕ್ಕೂ ಚನ್ನಾಗಿ ಇರುತ್ತದೆ ಎಂಬುವಂತ ಭಾವನೆ ಇರುತ್ತದೆ. ಹಾಗಿದ್ದರೇ ಸಮುದ್ರದ ತೀರದವರೆಗೆ ಯಾಕೆ ಹೋಗಬೇಕು ನಮ್ಮ ಹುಬ್ಬಳ್ಳಿಯಲ್ಲಿಯೇ ಸಿಗುತ್ತೇ ಅತ್ಯಾದ್ಬುತ ರುಚಿಕರ ಊಟ.

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸುಮಾರು 21 ವರ್ಷಗಳಿಂದ ಮೀನಿನ ರುಚಿಯನ್ನು ಉಣಬಡಿಸುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದ ಓನ್ಲಿ ಫಿಶ್ ಈಗ ವಿನೂತನ ಹಾಗೂ ವಿಭಿನ್ನ ಶೈಲಿಯಲ್ಲಿ ಆರಂಭಗೊಂಡಿದೆ. ಹಾಗಿದ್ದರೇ ಇಲ್ಲಿಯ ವೈಶಿಷ್ಟ್ಯ ಕಣ್ಣು ತುಂಬಿಕೊಳ್ಳಲೇ ಬೇಕು... ಅರೇ ಕಣ್ಣು ಮಾತ್ರ ಅಲ್ಲ ಇಲ್ಲಿನ ರುಚಿಯಾದ ಸುಚಿಯಾದ ಊಟದ ಮೂಲಕ ಹೊಟ್ಟೆ ಕೂಡ ತುಂಬಿಕೊಳ್ಳಬಹುದು.

ಹೀಗೆ ಮಂಗಳೂರು ಶೈಲಿಯ ಮನೆಯ ಸೊಬಗನ್ನು ನಿಮ್ಮ ಕಣ್ಣು ತುಂಬಿಸುತ್ತಿರುವ ಈ ಭವ್ಯವಾದ ವೈಭವವೇ ಹುಬ್ಬಳ್ಳಿಯ ಹೊಸಕೋರ್ಟ್ ಹತ್ತಿರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಓನ್ಲಿ ಫಿಶ್. ಮನೆಯಲ್ಲಿಯೇ ಮಾಡಿರುವಂತ ಅಡುಗೆಯ ರುಚಿಯನ್ನು ನೀವು ಬೇರೆ ಎಲ್ಲಿಯೂ ಕೂಡ ಅನುಭವಿಸಲು ಸಾಧ್ಯವಿಲ್ಲ ಎಂಬುವಂತೇ ಅಮ್ಮ ಮಾಡಿದ ಥರಾನೇ ಅಡುಗೆ ಮಾಡಿ ಮೀನು ಊಟದ ಸವಿಯನ್ನು ಉಣ ಬಡಿಸುತ್ತಿದೆ ಓನ್ಲಿ ಫಿಶ್. ರಾಧಾ ಭಟ್ ಹಾಗೂ ಗೋಪಾಲಕೃಷ್ಣ ಭಟ್ ಅವರ ಮಾರ್ಗದರ್ಶನದಲ್ಲಿ ಸುಮಾರು 21 ವರ್ಷಗಳಿಂದ ಸಂತೃಪ್ತ ಗ್ರಾಹಕರನ್ನು ಹೊಂದಿರುವ ಓನ್ಲಿ ಫಿಶ್. ಈಗ ವಿಭಿನ್ನ ಶೈಲಿಯ ಹಾಗೂ ಮಂಗಳೂರು ಮನೆಯ ಪ್ರಾಂಗಣದಲ್ಲಿ ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನು ನೀಡುತ್ತಾ ಬರುತ್ತಿದೆ.

ಇನ್ನೂ ಕೊಂಕಣಿ ಶೈಲಿಯ sea food ಹಾಗೂ ಬಿರಿಯಾನಿ ಮೂಲಕ ಎಲ್ಲರ ಮನೆ ಮಾತಾಗಿರುವ ಓನ್ಲಿ ಫಿಶ್ ನಿಜಕ್ಕೂ ಕಡಲ ತೀರದ ಊಟದ ಸೌಭಾಗ್ಯವನ್ನು ಹುಬ್ಬಳ್ಳಿಯಲ್ಲಿಯೇ ಕಲ್ಪಿಸುತ್ತಿದೆ. ರೋಹಿತ ಭಟ್ ಹಾಗೂ ರಾಕೇಶ ಭಟ್ ಮುಂದಾಳತ್ವದಲ್ಲಿ ಸಾವಿರಾರು ಗ್ರಾಹಕರ ವಿಶ್ವಾಸಗಳಿಸಿರುವ ಓನ್ಲಿ ಫಿಶ್ ಈಗ ಹೊಸ ಕಟ್ಟಡದಲ್ಲಿ ಹೊಸ ಶೈಲಿಯಲ್ಲಿ ಸಾಂಪ್ರದಾಯಿಕ ಊಟದ ರುಚಿಯೊಂದಿಗೆ ತಲೆ ಎತ್ತಿದೆ.

ಇನ್ನೂ ಮಂಗಳೂರು ಮನೆಯ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಓನ್ಲಿ ಫಿಶ್ ಬೆಳಿಗ್ಗೆ 12-30ರಿಂದ ಮಧ್ಯಾಹ್ನ 3-30ರ ವರೆಗೆ ಹಾಗೂ ಸಂಜೆ 7-30ರಿಂದ ರಾತ್ರಿ 10 ಗಂಟೆಯವರೆಗೆ ಗ್ರಾಹಕರಿಗೆ ಸೇವೆ ಒದಗಿಸಲು ಸಿದ್ಧವಾಗಿರುತ್ತದೆ. ಅಲ್ಲದೆ ಸೋಮವಾರ ರಜೆ ಇದ್ದು, ಉಳಿದ ಆರು ದಿನ ಗ್ರಾಹಕರ ಅಭಿರುಚಿಗೆ ತಕ್ಕಂತೆ ಊಟವನ್ನು ಒದಗಿಸುವ ಮೂಲಕ ನೆಚ್ಚಿನ ಮನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನೂ ವಿಶೇಷ ಅಂದರೆ ಇಲ್ಲಿ ಯಾವುದೇ ಮದ್ಯಪಾನ ಹಾಗೂ ಧೂಮಪಾನಕ್ಕೆ ಅವಕಾಶ ಇಲ್ಲದೇ ಮಹಿಳಾ ಸಿಬ್ಬಂದಿಯೇ ಕಾರ್ಯನಿರ್ವಹಿಸುವ ಮೂಲಕ ಮನೆಯ ಅಡುಗೆಯ ರುಚಿಯನ್ನ ಉಣಬಡಿಸುತ್ತಿದೆ ಹುಬ್ಬಳ್ಳಿಯ ಓನ್ಲಿ ಫಿಶ್. ಇಲ್ಲಿನ ಕಾರ್ಯವೈಖರಿಯ ಬಗ್ಗೆ ಪರಿಚಯಿಸುತ್ತಾರೆ ರಾಧಾ ಭಟ್.

ಇನ್ನೂ ಓನ್ಲಿ ಫಿಶ್ ನಲ್ಲಿ ಸುರ್ಮಯ್, ಪಾಪ್ಲೆಟ್, ಬಾಂಗ್ಡಾ, ಬೆಳಂಜಿ, ಪ್ರಾನ್ಸ್, ಏಡಿ, ಶೆಲ್, ಕಾಣೆ ಮೀನು ಲಭ್ಯವಿದ್ದು, ವಿಶೇಷವಾಗಿ ಸುರ್ಮಯ್ ಫಿಶ್ ತಾಲಿ, ಬಾಂಗ್ಡಾ ಫಿಶ್ ಥಾಲಿ ಗ್ರಾಹಕರನ್ನು ಹೆಚ್ಚಾಗಿ ಸೆಳೆಯುವಂತೆ ಮಾಡಿದೆ. ಯಾವುದೇ ಕೆಮಿಕಲ್ ಮಿಶ್ರಿತ ಮಸಾಲೆ ಪದಾರ್ಥಗಳನ್ನು ಬಳಸದೇ ಮನೆಯಲ್ಲಿಯೇ ತಯಾರಿಸಿದ ನೈಸರ್ಗಿಕ ಮಸಾಲೆ ಪದಾರ್ಥಗಳನ್ನು ಬಳಸಿ ಅಡುಗೆ ಮಾಡಲಾಗುತ್ತದೆ. ಹಾಗಿದ್ದರೇ ಇಲ್ಲಿನ ಅಡುಗೆ ವೈಶಿಷ್ಟ್ಯವನ್ನೊಮ್ಮೆ ನೋಡಿ..

ಒಟ್ಟಿನಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಇಂತಹದೊಂದು ಅಮ್ಮನ ಕೈ ರುಚಿಗೆ ಸಾಕ್ಷಿಯಾಗಿದೆ ಓನ್ಲಿ ಫಿಶ್ ಹಾಗಿದ್ದರೇ ಮತ್ತೇ ಯಾಕೆ ತಡ ಮಾಡ್ತೀರಾ ಇಂದೇ ಭೇಟಿ ನೀಡಿ ನಿಮ್ಮ ಊಟದ ಅಭಿರುಚಿಗೆ ಹೊಸ ಆಯಾಮವನ್ನು ಕಲ್ಪಿಸಿ..

Edited By : Shivu K
Kshetra Samachara

Kshetra Samachara

05/07/2022 04:25 pm

Cinque Terre

47.55 K

Cinque Terre

6

ಸಂಬಂಧಿತ ಸುದ್ದಿ