ಹುಬ್ಬಳ್ಳಿ: ದೇಶಪಾಂಡೆ ಫೌಂಡೇಶನ್ ಉದ್ಯೋಗ ಉತ್ತೇಜನ, ಸ್ಟಾರ್ಟಪ್ಸ್ ಡೈಲಾಗ್ ಹೀಗೆ ವಿಶೇಷ ಕಾರ್ಯಕ್ರಮಗಳ ಮೂಲಕ ದುಡಿಯುವ ಕೈಗಳಿಗೆ ಬಲ ತುಂಬುವ ಕೆಲಸ ಮಾಡುತ್ತಿದೆ.
ಇಂದು ದೇಶಪಾಂಡೆ ಫೌಂಡೇಶನ್ ಸಹಯೋಗದಲ್ಲಿ ಬಯರರ್ಸ್ ಆ್ಯಂಡ್ ಸೆಲರ್ಸ್ ಮೀಟ್ (buyers and sellers meet ) ಎನ್ನುವ ವಿಶೇಷ ಕಾರ್ಯಕ್ರಮದ ಅಡಿಯಲ್ಲಿ ಮನೆಯಲ್ಲಿ ತಯಾರಿಸುವ ಹೋಮೇಡ್ ತಿಂಡಿ ತಿನಿಸುಗಳಿಗೆ ಮಾರುಕಟ್ಟೆಯನ್ನು ಹೇಗೆ ಮಾಡುವ ಬಗ್ಗೆ ಪರಿಣಿತರಿಂದ ಮಾಹಿತಿ ನೀಡಲಾಯಿತು. ಸಣ್ಣ ಉದ್ಯಮದಿಂದ ದೊಡ್ಡ ಉದ್ಯಮಕ್ಕೆ ಕಾಲಿಟ್ಟವರು ತಾವು ಎದುರಿಸಿದ ಸವಾಲು ಸಮಸ್ಯೆಗಳ ಬಗ್ಗೆ ಮಾಹಿತಿ ನವೋದ್ಯಮಿಗಳಿಗೆ ಉತ್ಸಾಹ ತುಂಬಿದರು.
ಸಣ್ಣ ಉದ್ಯಮದಲ್ಲಿ ಸಾಕಷ್ಟು ತೊಡಕುಗಳಿರುತ್ತವೆ ಅವುಗಳನ್ನು ಎದುರಿಸಿ ಮುಂದೆ ಸಾಗುವುದೇ ಬ್ಯುಜಿನೆಸ್. ಯಾವುದೇ ಅಡೆತಡೆಗಳು ಬಂದರು ಛಲದಿಂದ ಮುಂದೆ ಸಾಗಬೇಕು ಎಂದು ಪಾಟೀಲ್ ಆ್ಯಂಡ್ ಅಶೋಕ್ ಮಸಾಲಾ ಪ್ರಾಡಕ್ಟ್ ಕೋ ಪಾಟ್ನರ್ ವೀರಭದ್ರಪ್ಪ ತೊಪ್ಪಳ ಹೇಳಿದರು.
ಇನ್ನು ಶಿರಸಿ,ಹಾವೇರಿ,ದಾವಣಗೆರೆ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದ ನವೋದ್ಯಮಿಗಳು ತಾವು ತಯಾರಿಸುವ ಬಗೆಬಗೆಯ ತಿಂಡಿ ತಿನಿಸುಗಳು, ಗಾಣದ ಎಣ್ಣೆ, ಶ್ಯಾವಿಗೆ, ಹಪ್ಪಳ, ಸಂಡಿಗೆಯ ಪ್ರದರ್ಶನ ಮತ್ತು ಮಾರಾಟ ನಡೆಯಿತು.
ಇನ್ನು ಮನೆಯಲ್ಲಿ ತಯಾರಿಸಿದ ಪ್ರಾಡಕ್ಟ್ಸ್ ಗಳನ್ನು ಹೊರಗಡೆ ಮಾರುಕಟ್ಟೆಯಲ್ಲಿ ಹೇಗೆ ಮಾರಾಟ ಮಾಡಬೇಕು ಎನ್ನುವ ಸಂಪೂರ್ಣ ಮಾಹಿತಿ ಪಡೆದ ನವೋದ್ಯಮಿಗಳು ದೇಶಪಾಂಡೆ ಫೌಂಡೇಶನ್ ಗೆ ಧನ್ಯವಾದ ಹೇಳಿದ್ದಾರೆ.
ಇನ್ನು ದೇಶಪಾಂಡೆ ಫೌಂಡೇಶನ್ ನವೋದ್ಯಗಳಿಗಾಗಿ ಇಂತಹ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನವೋದ್ಯಮಿಗಳಿಗೆ ಉತ್ತೇಜನ ನೀಡಲಾಗುತ್ತದೆ ಎಂದುದೇಶಪಾಂಡೆ ಫೌಂಡೇಶನ್ ಸಹ ನಿರ್ದೇಶಕರಾದ ಸಂದೀಪ್ ಸಬರವಾಲ್ ಹೇಳಿದರು.
ಒಟ್ಟಿನಲ್ಲಿ ನವೋದ್ಯಮಿಗಳು ಪರಿಣಿತರಿಂದ ಮಾಹಿತಿ ಪಡೆದು ಕಾರ್ಯಕ್ರಮದ ಲಾಭ ಪಡೆದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/06/2022 11:11 am