ಹುಬ್ಬಳ್ಳಿ: ಇಷ್ಟು ದಿನ ಸಾರ್ವಜನಿಕರಲ್ಲಿ ಹತ್ತು ಹಾಗೂ ಇಪ್ಪತ್ತು ರೂಪಾಯಿ ಕ್ವಾಯಿನ್ ಬಗ್ಗೆ ಒಂದು ಆತಂಕ ಇತ್ತು. ಆದರೆ ಹುಬ್ಬಳ್ಳಿಯ ಹೊಟೇಲ್ ವರ್ತಕರು ಈ ಆತಂಕಕ್ಕೆ ಬ್ರೇಕ್ ಹಾಕಿದ್ದು, ಈಗ 10,20ರೂಪಾಯಿ ಮುಖ ಬೆಲೆಯ ನಾಣ್ಯಗಳನ್ನು ಯಾವುದೇ ಆಕ್ಷೇಪಣೆ ಇಲ್ಲದೆ ಪಡೆಯುತ್ತಿದ್ದಾರೆ.
ಹೌದು... ಕೆಲವು ತಿಂಗಳ ಹಿಂದೆಯಷ್ಟೆ ಚಾಲ್ತಿಯಲ್ಲಿದ್ದ ಹತ್ತು ರೂಪಾಯಿ ನಾಣ್ಯ ಇತ್ತೀಚಿನ ದಿನಗಳಲ್ಲಿ ಚಲಾವಣೆಯೇ ಕಾಣುತ್ತಿರಲಿಲ್ಲ. ಅಲ್ಲದೇ ಜನರು ಕೂಡ ಹತ್ತು ರೂಪಾಯಿ ನಾಣ್ಯ ನೋಡಿದರೇ ಇದು ಚಲಾವಣೆಯಲ್ಲಿ ಇಲ್ಲ ಎಂದು ಗಂಭೀರವಾಗಿ ನಂಬಿದ್ರು. ಆದ್ರೆ ಈಗ ಹುಬ್ಬಳ್ಳಿಯ ಹೊಟೇಲ್ ಉದ್ಯಮಿಗಳು ಹತ್ತು, ಇಪ್ಪತ್ತು ರೂಪಾಯಿ ಮುಖ ಬೆಲೆಯ ನಾಣ್ಯಗಳನ್ನು ಪಡೆಯುವ ಹಾಗೂ ಕೊಡುವ ಮೂಲಕ ಮತ್ತೊಮ್ಮೆ ನಾಣ್ಯ ಚಲಾವಣೆಗೆ ಮುನ್ನುಡಿ ಬರೆದಿದ್ದಾರೆ.
ಇನ್ನೂ ಹುಬ್ಬಳ್ಳಿಯ ಬಹುತೇಕ ಖಾಸಗಿ ಹೊಟೇಲ್ ಗಳಲ್ಲಿ ಕಳೆದ ಎರಡು ದಿನಗಳಿಂದ ಸೂಚನಾ ಫಲಕಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದು, 10,20 ರೂಪಾಯಿ ನಾಣ್ಯಗಳನ್ನು ಚಲಾವಣೆಗೆ ಸ್ವೀಕರಿಸಲಾಗುವುದು ಎಂದು ಸಾರ್ವಜನಿಕರಿಗೆ ಮಾಹಿತಿ ರವಾನೆ ಮಾಡುವ ಮೂಲಕ ಸಾರ್ವಜನಿಕರ ಆತಂಕವನ್ನು ದೂರ ಮಾಡಿದ್ದಾರೆ.
ಈಗಾಗಲೇ ಸ್ಟೇಷನ್ ರಸ್ತೆಯಲ್ಲಿರುವ ಹಾಗೂ ನೀಲಿಜನ್ ರಸ್ತೆಯಲ್ಲಿರುವ ಬಹುತೇಕ ಹೊಟೇಲ್ ಗಳಲ್ಲಿ ಹತ್ತು, ಇಪ್ಪತ್ತು ರೂಪಾಯಿ ಮುಖ ಬೆಲೆಯ ನಾಣ್ಯಗಳ ಚಲಾವಣೆಗೆ ನಾಂದಿ ಹಾಡಿದ್ದಾರೆ.
Kshetra Samachara
01/06/2022 11:29 am