ಹುಬ್ಬಳ್ಳಿ: ದಿಢೀರನೇ ತೈಲ ಬೆಲೆಗಳ ತೆರಿಗೆ ಇಳಿಸಿದ್ದರಿಂದ ಇಡೀ ರಾಜ್ಯಾದ್ಯಂತ ಪೆಟ್ರೋಲ್ ಬಂಕ್ ಮಾಲೀಕರು, ಅಸೋಸಿಯೇಷನ್‌ನಿಂದ ಇಂದು ಬಂದ್ ಕರೆ ನೀಡಲಾಗಿತ್ತು. ಆದ್ರೆ ವಾಣಿಜ್ಯ ನಗರಿಯಲ್ಲಿ ಎಂದಿನಂತೆ ಪೆಟ್ರೋಲ್ ಬಂಕ್‌ಗಳು ಕಾರ್ಯನಿರ್ವಹಿಸುತ್ತಿವೆ.
ಇಂದು ಪೆಟ್ರೋಲ್ ಬಂಕ್‌ಗಳು ಬಂದ್ ಆಚರಿಸಲಿವೆ ಎಂದು ವದಂತಿ ಹರಡಿತ್ತು. ಆದ್ದರಿಂದ ನಿನ್ನೆ ಪೆಟ್ರೋಲ್ ಬಂಕ್‌ಗಳತ್ತ ಜನರು ಜಮಾವಣೆಗೊಂಡಿದ್ದರು. ಅಷ್ಟೇ ಅಲ್ಲದೆ ಕಿಲೋಮೀಟರ್‌ಗಟ್ಟಲೇ ಸರದಿ ನಿಂತು ರೈತಾಪಿ ವರ್ಗ ಟ್ರ್ಯಾಕ್ಟರ್‌ಗೆ ಡಿಸೇಲ್ ತುಂಬಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಧಾರವಾಡ ಜಿಲ್ಲೆಯಾದ್ಯಂತ ಪೆಟ್ರೋಲ್ ಬಂಕ್ ಬಂದ್ ಆಗಿಲ್ಲ ಎಂದೇ ಹೇಳಬಹುದು.
Kshetra Samachara
31/05/2022 12:42 pm