ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಿಜಯ ಕರ್ನಾಟಕ ಎಕ್ಸ್ ಪೋ: ನಿಮ್ಮ ಮನೆ ಹಾಗೂ ಲೈಫ್ ಸ್ಟೈಲ್ ಆಯ್ಕೆಯ ಸುವರ್ಣ ಅವಕಾಶ

ಹುಬ್ಬಳ್ಳಿ: ಪ್ರತಿಯೊಬ್ಬರಿಗೂ ಸುಸಜ್ಜಿತ ಮನೆ ನಿರ್ಮಾಣ, ಅದಕ್ಕೊಪ್ಪುವ ಆಕರ್ಷಕ ಫರ್ನಿಚರ್, ಇರಬೇಕೆಂಬುದು ಅಸೆ ಹಾಗೂ ಕನಸು ಸಹಜ. ಆದರೆ ಆ ಮನೆ ಕನಸನ್ನು ನನಸು ಮಾಡಲು ಅಲ್ಲಲ್ಲಿ ಅಲೆದಾಡಬೇಕಾಗುತ್ತೆ. ವಸ್ತುಗಳ ಗುಣಮಟ್ಟದ ಬಗ್ಗೆಯೇ ಸ್ಪಲ್ಪ ಆತಂಕ ಇದ್ದೇ ಇರುತ್ತೆ. ಗ್ರಾಹಕರು ಹಾಗೂ ನಿರ್ಮಾಣಕಾರರು ಮತ್ತು ಗೃಹೋಪಯೋಗಿ ವಸ್ತುಗಳ ಮಾರಾಟಗಾರರ ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಟೈಮ್ಸ್ ಸಮೂಹ ಸಂಸ್ಥೆಯ ವಿಜಯ ಕರ್ನಾಟಕ ಪತ್ರಿಕೆಯು " ಪ್ರಾಪರ್ಟಿ & ಲೈಫ್ ಸ್ಟೈಲ್ ಎಕ್ಸ್ ಪೋ '' ಹಮ್ಮಿಕೊಂಡಿದೆ.

ಹೌದು.. ನಿಮ್ಮ ಕನಸಿನ ಮನೆ, ನಿವೇಶನ ಹಾಗೂ ಗೃಹೋಪಯೋಗಿ ವಸ್ತುಗಳ ಖರೀದಿಗೆ ಗ್ರಾಹಕರಿಗೆ ವಿಜಯ ಕರ್ನಾಟಕ ಪತ್ರಿಕೆ ಸುವರ್ಣಾವಕಾಶವನ್ನು ಒದಗಿಸಿದೆ. ಧಾರವಾಡ ಜಿಲ್ಲೆ ಮಾತ್ರವಲ್ಲದೆ ಉತ್ತರ ಕರ್ನಾಟಕ ಭಾಗದ ಗ್ರಾಹಕರಿಗೆ ತಮ್ಮ ಕನಸಿನ ಮನೆಯನ್ನು ಸಾಕಾರಗೊಳಿಸಲು, ನಿವೇಶನ ಖರೀದಿಸಲು, ಮನೆಯನ್ನು ಮತ್ತಷ್ಟು ಗೃಹೋಪಯೋಗಿ ವಸ್ತುಗಳಿಂದ ಅಲಂಕಾರಿಕ ಮಾಡಲು ಮಾತ್ರವಲ್ಲದೆ ಹೊಸ ಲೈಫ್ ಸ್ಟೈಲ್ ಪರಿಚಯಿಸುವ ಸದುದ್ದೇಶದಿಂದ ವರ್ಲ್ಡ್ ಸ್ಕ್ವಾಯರ್ ಹಾಗೂ ದಿ ವರ್ಲ್ಡ್ ಸ್ಕ್ವಾಯರ್ ಟವರ್ ಪ್ರಸ್ತುತ ಪಡಿಸುತ್ತಿರುವ ಬೃಹತ್ ಪ್ರಾಪರ್ಟಿ & ಲೈಫ್ ಸ್ಟೈಲ್ ಎಕ್ಸ್ ಪೋವನ್ನು ಇದೇ ಮೇ 27, 28 ಮತ್ತು 29ರಂದು ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿರುವ ಗೋಕುಲ ಗಾರ್ಡನ್ ನಲ್ಲಿ ಆಯೋಜಿಸಲಾಗಿದೆ.

ವಿಜಯ ಕರ್ನಾಟಕದ ಬಹು ನಿರೀಕ್ಷಿತ ಪ್ರಾಪರ್ಟಿ & ಲೈಫ್ ಸ್ಟೈಲ್ ಎಕ್ಸ್ ಪೋ ಮತ್ತೇ ಬಂದಿದೆ‌. ಮನೆ, ನಿವೇಶನ, ಪೀಠೋಪಕರಣಗಳು, ಸೌಂದರ್ಯವರ್ಧಕಗಳು, ಬಟ್ಟೆಗಳು, ಅಲಂಕಾರಿಕ ವಸ್ತುಗಳು, ಗೃಹ ಉತ್ಪನ್ನಗಳು, ಕರಕುಶಲ ವಸ್ತುಗಳು ಮತ್ತು ಮನೆಯ ಲೈಫ್ ಸ್ಟೈಲ್ ಗಳಿಗೆ ಅಗತ್ಯ ಪೀಠೋಪಕರಣಗಳು ಒಂದೇ ಸೂರಿನಡಿಯಲ್ಲಿ ಒದಗಿಸಲು ವಿಜಯ ಕರ್ನಾಟಕ ಪತ್ರಿಕೆ ಸಿದ್ಧವಾಗಿದೆ.

ಗೃಹಪಯೋಗಿ ವಸ್ತುಗಳನ್ನು ಖರೀದಿಸಬೇಕು ಅಂದರೆ ನಿಜಕ್ಕೂ ಮಾರ್ಕೆಟ್ ಪೂರ್ತಿಯಾಗಿ ಸುತ್ತ ಬೇಕು. ಅಲ್ಲದೆ ನಮ್ಮ ಇಷ್ಟದ ವಸ್ತುಗಳು ನಮ್ಮ ಕೈಗೆಟುಕುವ ದರದಲ್ಲಿ ಸಿಗದೇ ನಿರಾಶೆಯಾಗಿ ಮನೆಗೆ ಮರಳುವಂತ ಅದೆಷ್ಟೋ ಸನ್ನಿವೇಶಗಳು ನಡೆದಿರುತ್ತವೆ. ಆದರೆ ಇಂತಹ ಗ್ರಾಹಕರ ಹಲವಾರು ಸಮಸ್ಯೆಗೆ ಪರಿಹಾರ ಒದಗಿಸುವ ಹಾಗೂ ಒಂದೇ ಸೂರಿನಡಿಯಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುವ ಸದುದ್ದೇಶದಿಂದ ಪ್ರಾಪರ್ಟಿ & ಲೈಫ್ ಸ್ಟೈಲ್ ಎಕ್ಸ್ ಪೋ ಆಯೋಜಿಸಲಾಗಿದೆ. ಈ ಎಕ್ಸಪೋದಲ್ಲಿ ಶ್ರೀ ದುರ್ಗಾ ಡೆವಲಪರ್ಸ್ & ಪ್ರಮೋಟರ್ಸ್, ರಾಟ್ಸಾನ್ ಗ್ರೂಪ್, ಬಿ.ಎಂ.ಅಸೋಸಿಯೇಟ್ಸ್, ಪ್ರಕಾಶ ಹೋಮ್ಸ್, ಆರ್.ವಿ.ಡೆವಲಪರ್ಸ್, ಹೆರಿಟೇಜ್ ಬಿಲ್ಡರ್ಸ್, ಎಸ್.ಎಸ್.ವಿ ಡೆವಲಪರ್ಸ್, ಸಾಯಿರಾಮ ಡೆವಲಪರ್ಸ್ & ಬಿಲ್ಡರ್ಸ್, ಇನ್ಪ್ರಾ ಸಲ್ಯೂಷನ್, ಏರಾ ಸೈನ್ಸ್ ಸೆಂಟರ್, ಮೇರೂ ಐಎಎಸ್ & ಕೆಎಎಸ್ ಸ್ಟಡಿ ಸೆಂಟರ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ, ರೇಷ್ಮೆ ಇಲಾಖೆ ಜಿಲ್ಲಾ ಪಂಚಾಯತ ಧಾರವಾಡ, ಸಫಲ್, ಕುಶಾಲ್ಸ್, ಕೆನರಾ ಬ್ಯಾಂಕ್, ಕರ್ನಾಟಕ ವಿಕಾಸ ಬ್ಯಾಂಕ್, ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಬ್ರಿಹಿತಿ ಫಾರ್ಮ್ಸ್, ಸ್ಫೂರ್ತಿ ಸಂಸ್ಥೆಗಳು ಎಕ್ಸ್ ಪೋದಲ್ಲಿ ಪಾಲ್ಗೊಂಡಿವೆ.

ಹಾಗಿದ್ದರೇ ಮತ್ತೇ ಯಾಕೆ ತಡ ನಿಮ್ಮ ಕನಸಿನ ಮನೆಯೊಂದಿಗೆ ನಿಮ್ಮ ಲೈಫ್ ಸ್ಟೈಲ್ ಬದಲಾಯಿಸಲು ವಿಜಯ ಕರ್ನಾಟಕ ಎಕ್ಸ್ ಪೋಗೆ ಭೇಟಿ ನೀಡಿ ಈ ಸುವರ್ಣಾವಕಾಶದ ಸದುಪಯೋಗ ಪಡೆದುಕೊಳ್ಳಿ..

ಪಾಯೋಜಕತ್ವ, ಮಳಿಗೆಗಳ ಬುಕಿಂಗ್ ಹಾಗೂ ಹೆಚ್ಚಿನ ಮಾಹಿತಿಗಾಗಿ..

ದೂರವಾಣಿ- 9880719125, 9845843165, 9341110762, 9980981860

Edited By : Nagesh Gaonkar
Kshetra Samachara

Kshetra Samachara

27/05/2022 06:56 pm

Cinque Terre

108.1 K

Cinque Terre

1

ಸಂಬಂಧಿತ ಸುದ್ದಿ