ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಸಹಯೋಗದೊಂದಿಗೆ ಹುಬ್ಬಳ್ಳಿಯ ಮಹಾತ್ಮಾ ಗಾಂಧಿ ಸ್ಮಾರಕ ಉದ್ಯಾನವನ ಹಾಗೂ ಇಂದಿರಾಗಾಂಧಿ ಗಾಜಿನ ಮನೆಯ ಆವರಣದಲ್ಲಿ ಆಯೋಜಿಸಲಾಗಿರುವ ಗೃಹಶೋಭಾ ಕಾರ್ಯಕ್ರಮಕ್ಕೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ ಅವರು ಚಾಲನೆ ನೀಡಿದರು.
ಈಗಾಗಲೇ ಗಾಜಿನ ಮನೆ ಆವರಣದಲ್ಲಿ ಗೃಹ ಬಳಕೆಯ ಅಗತ್ಯ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಹಿನ್ನೆಲೆಯಲ್ಲಿ 80 ಸ್ಟಾಲ್‌ಗಳಲ್ಲಿ ಮಾರಾಟ ಹಾಗೂ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಾಗಿದೆ. ವಿವಿಧ ಬಗೆಯ ಬಟ್ಟೆಗಳು, ಗೃಹಬಳಕೆಯ ಉಪಕರಣಗಳು, ಸಿಹಿ ತಿನಿಸು, ಸೌಂದರ್ಯ ವರ್ದಕಗಳು ಸೇರಿದಂತೆ ಹತ್ತು ಹಲವಾರು ಬಗೆಯ ಉತ್ಪನ್ನಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಂದು ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಇನ್ನೂ ವಸ್ತು ಪ್ರದರ್ಶನ ಹಾಗೂ ಮಾರಾಟಕ್ಕೆ ಸಂಜೆಯಿಂದಲೇ ಜನರು ಆಗಮಿಸುವ ಮೂಲಕ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ದೊರೆತಿರುವುದು ನಿಜಕ್ಕೂ ವಿಶೇಷವಾಗಿದೆ.
ಕಾರ್ಯಕ್ರಮದಲ್ಲಿ ಚಂದ್ರಕಾಂತ ಸೂಜಿ, ಡೈರೆಕ್ಟರ್ ಸೈಮನ್ ಎಕ್ಸಿಕ್ಯುಟಿವ್ ಎಂ.ಎಸ್.ನಾಗಚಂದ್ರ, ಬೃಂದಾವನ ಎಕ್ಸಿಬಿಷನ್‌ನ ಎಸ್.ಕೆ ಪಾಟೀಲ, ಮಾರ್ಕೆಟಿಂಗ್ ಮುಖ್ಯಸ್ಥ ಎಡ್ವಿನ್ ಸೇರಿದಂತೆ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದ ಮುಖ್ಯಸ್ಥ ಕೇಶವ ನಾಡಕರ್ಣಿ, ಮಹೇಶ ಪಾಚಲಾಗ ಸೇರಿದಂತೆ ಇತರರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Kshetra Samachara
12/05/2022 09:52 pm