ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಜನತೆಗೆ ಅಂತರಾಷ್ಟ್ರೀಯ ಮಟ್ಟದ ಹಾಗೂ ವಿನೂತನ ರೀತಿಯ ಮನರಂಜನೆ ನೀಡಲು ಹುಬ್ಬಳ್ಳಿ ಹೊಸ ಕೋರ್ಟ್ ಹಿಂದಿರುವ ಮೈದಾನದಲ್ಲಿ ಹುಬ್ಬಳ್ಳಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಉತ್ಸವಕ್ಕೆ ಪ್ರಖ್ಯಾತ ರೂಪದರ್ಶಿ ಹಾಗೂ ಮಿಸೆಸ್ ಇಂಡಿಯಾ-2019 ರೇಷ್ಮಾ ಫರ್ನಾಂಡೀಸ್ ಚಾಲನೆ ನೀಡಿದರು.
ಬಳಿಕ ಜಂಟಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ರೇಷ್ಮಾ ಫರ್ನಾಂಡೀಸ್ ಹಾಗೂ ಹುಬ್ಬಳ್ಳಿ ಉತ್ಸವದ ವ್ಯವಸ್ಥಾಪಕ ಎಂ.ಎಸ್.ನಾಗಚಂದ್ರ ಅವರು, ಅವಳಿನಗರದ ಜನರಿಗೆ ವಿನೂತನ ಹಾಗೂ ವಿಭಿನ್ನ ರೀತಿಯ ಮನರಂಜನೆ ನೀಡಲು ನಿರ್ಧರಿಸಿದ್ದು, ಉತ್ಸವ ಮಾರ್ಚ್ 16ರಿಂದ ಆರಂಭಗೊಂಡಿದೆ. 45 ದಿನಗಳ ಕಾಲ ನಡೆಯಲಿರುವ ಈ ಉತ್ಸವದಲ್ಲಿ ಹಲವಾರು ವಿಶೇಷತೆಯನ್ನು ಕಲ್ಪಿಸಲಾಗಿದೆ ಎಂದರು.
ಸೆಲ್ಪಿ ಪಾಯಿಂಟ್, ಕೇಕ್ ಷೋ, ವಿಶೇಷವಾಗಿ ಡಾ. ರಾಜಕುಮಾರರ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಕೇಕ್ ಷೋ, ರೋಬೋಟಿಕ್ ಪಕ್ಷಿಗಳು, ಪೆಟ್ರೋನಾಸ್, ಐಪಿಲ್ ಹಾಗೂ ದುಬೈನ ಬುರ್ಜ್ ಕಲಿಫಾ ಟವರ್‌ಗಳನ್ನು ಸಾರ್ವಜನಿಕರಿಗೆ ಮನರಂಜನೆಗಾಗಿ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.
ಇನ್ನೂ ಕೊಲಂಬಸ್, ಝಾಯಿಂಟ್ ವ್ಹೀಲ್, ಟೋರಾ ಟೋರಾ, ಬ್ರೇಕ್ ಡ್ಯಾನ್ಸ್, ಕಾರು ಮತ್ತು ಬೈಕ್ ಸಾಹಸ ಪ್ರದರ್ಶನಗಳ ವಿಸ್ಮಯ ನೋಟವನ್ನು ಸಾರ್ವಜನಿಕರ ಮನರಂಜನೆಗಾಗಿ ಇಡಲಾಗಿದೆ ಎಂದು ಅವರು ಹೇಳಿದರು.
Kshetra Samachara
17/03/2022 04:30 pm