ಕುಂದಗೋಳ : ಗುಡಗೇರಿ ಗ್ರಾಮದ ಸುತ್ತ ಮುತ್ತಲಿನ ಹಳ್ಳಿಗರೇ, ಗುಡಗೇರಿ ಮಾರ್ಗವಾಗಿ ಪ್ರಯಾಣ ಬೆಳೆಸುವ ವಾಹನ ಸವಾರರೇ ಇನ್ಮುಂದೆ ನಿಮ್ಮ ಕಾರು, ಬೈಕ್, ಟ್ರ್ಯಾಕ್ಟರ್ ಇತರೆ ವಾಹನಗಳಿಗೆ ಪೆಟ್ರೋಲ್, ಡಿಸೇಲ್ ನಿಮ್ಮೂರು ಗುಡಗೇರಿಯಲ್ಲೇ ಸಿಗಲಿದೆ.
ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್, ಜಗಜ್ಯೋತಿ ಬಸವೇಶ್ವರ ಪೆಟ್ರೋಲ್ ಪಂಪ್ ನ್ನು ಗ್ರಾಮೀಣ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ದಿ|| ಲಿಂಬಯ್ಯಸ್ವಾಮಿ ಲಿಂಬಯ್ಯಸ್ವಾಮಿಮಠ ಹಾಗೂ ಮಾಜಿ ಸಚಿವ ದಿ|| ಸಿ.ಎಸ್.ಶಿವಳ್ಳಿ ಆಶೀರ್ವಾದದಿಂದ ಗುಡಗೇರಿಯಲ್ಲಿ ಆರಂಭವಾಗಿದೆ.
ಈ ನೂತನ್ ಪೆಟ್ರೋಲ್ ಬಂಕ್ ನ್ನು ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯರು ಮಹಾಸ್ವಾಮಿಗಳು ಮುಕ್ತಿ ಮಂದಿರ, ಮಡಿವಾಳೇಶ್ವರ ಮಹಾಸ್ವಾಮಿಗಳು, ಶಾಸಕಿ ಕುಸುಮಾವತಿ ಶಿವಳ್ಳಿ ಸೇರಿದಂತೆ ನಾನಾ ಗಣ್ಯರು ಆಪ್ತರು ಆಗಮಿಸಿ ನೂತನ ಪೆಟ್ರೋಲ್ ಪಂಪ್ ಉದ್ಘಾಟಿಸಿ ಶುಭ ಹಾರೈಸಿದರು.
ವಿಶೇಷವಾಗಿ ಗ್ರಾಮೀಣ ಭಾಗದ ರೈತಾಪಿ ಚಟುವಟಿಕೆ ಕೆಲಸಗಳು ಸೇರಿದಂತೆ ಗುಡಗೇರಿ ಸುತ್ತ ಮುತ್ತಲಿನ ಹಳ್ಳಿಗರಿಗೆ ಈ ಪೆಟ್ರೋಲ್ ಬಂಕ್ ಗುಣಮಟ್ಟದ ತೈಲದ ಜೊತೆಗೆ ಫಿನೋ ಬ್ಯಾಂಕ್ ಸೌಲಭ್ಯ ಬ್ಯಾಂಕ್ ಮಾದರಿ ಸೇವೆಯನ್ನು ಸಹ ಗುಡಗೇರಿ ಭಾಗದ ಜನತೆಗೆ ಒದಗಿ ಬರಲಿದ್ದು ಬ್ಯಾಂಕಿನ್ ಎಲ್ಲ ಸೇವೆಗಳು ಸಿಗಲಿವೆ.
ಸಂಶಿ ಮಾರ್ಗದಿಂದ ಗುಡಗೇರಿ ಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಗುಡಗೇರಿ ಬಳಿ ಈ ನೂತನ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಶ್ರೀ ಬಸವೇಶ್ವರ ಪೆಟ್ರೋಲ್ ಪಂಪ್ ಆರಂಭವಾಗಿ ಎಲ್ಲ ವಾಹನ ಸವಾರರಿಗೆ ಅತ್ಯುತ್ತಮ ಗುಣಮಟ್ಟದ ಸೇವೆ ನೀಡಲಿದೆ.
ಒಟ್ಟಾರೆ ಗುಡಗೇರಿ ಭಾಗದ ರೈತಾಪಿ ಜನರೇ, ಹಾಗೂ ಗುಡಗೇರಿ ಮಾರ್ಗವಾಗಿ ಹುಬ್ಬಳ್ಳಿ, ಲಕ್ಷ್ಮೇಶ್ವರ, ಗದಗ, ಶಿಗ್ಗಾಂವಿ, ಹಾವೇರಿ ಮಾರ್ಗವಾಗಿ ಪ್ರಯಾಣ ಬೆಳೆಸುವ ವಾಹನ ಸವಾರರೇ ಇನ್ಮುಂದೆ ಶ್ರೀ ಬಸವೇಶ್ವರ ಪೆಟ್ರೋಲ್ ಪಂಪ್ ಗೆ ನಿಮ್ಮ ಆಗಮನವೇ ಶ್ರೀ ರಕ್ಷೆ.
Kshetra Samachara
28/12/2021 12:05 pm