ಹುಬ್ಬಳ್ಳಿ: ಆಹಾರ ಉದ್ಯಮಿಗಳಿಗೆ ಸುವರ್ಣ ಅವಕಾಶದ ಜೊತೆಗೆ ನಿಮ್ಮ ಕೈ ರುಚಿಯನ್ನು ಅವಳಿನಗರದ ಜನರಿಗೆ ಉಣಬಡಿಸಲು ಮಹಾವೇದಿಕೆಯೊಂದು ಸನ್ನದ್ಧವಾಗುತ್ತಿದೆ. ಬೀದಿ ಬದಿಯಲ್ಲಿ ವ್ಯಾಪಾರ ವಹಿವಾಟಿನಿಂದ ಬೇಸತ್ತಿರುವ ವ್ಯಾಪಾರಸ್ಥರಿಗೆ ಸೂಕ್ತ ನೆಲೆಯನ್ನು ಕಲ್ಪಿಸಲು fun foods India ಸಿದ್ಧವಾಗಿದೆ.
ಹೌದು.. ಸೂಕ್ತ ನೆಲೆಯಿಲ್ಲದೇ ಬ್ಯುಸಿನೆಸ್ ಅಭಿವೃದ್ಧಿ ಮಾಡಲು ಸಾಧ್ಯವಾಗದೇ ಇರುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ಚಿಂತನೆಯೊಂದನ್ನು fun foods ಮಾಡುತ್ತಿದೆ. ಈ ನಿಟ್ಟಿನಲ್ಲಿ ಜನವರಿ 26ರಂದು fun foods India ಲೋಕಾರ್ಪಣೆಗೊಳ್ಳಲಿದ್ದು, ಈ ಹಿನ್ನಲೆಯಲ್ಲಿ ಇದೇ ಡಿಸೆಂಬರ್ 10-11-12 ರ ಮೂರು ದಿನಗಳ ಸ್ಟ್ರೀಟ್ ಫುಡ್ ಇನೋವೇಶನ್ ಏಕ್ಸ್ ಪೋ ವನ್ನು ಧಾರವಾಡದ ಕಾಮತ ಯಾತ್ರಿ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದೆ.
ರಾಯಾಪೂರದ ಸಂಜೀವಿನಿ ಗಾರ್ಡನ್ ಹತ್ತಿರ ಭವ್ಯವಾದ ಜಾಗೆಯಲ್ಲಿ ನಿರ್ಮಾಣಗೊಳ್ಳುತ್ತಿರುವ fun foods India. ಜನವರಿ 26ರಂದು ಲೋಕಾರ್ಪಣೆಗೊಳ್ಳಲಿದ್ದು, ಈ fun foods India ಸ್ಥಳೀಯ ಉದ್ಯಮಿಗಳಿಗೆ ಪ್ರೋತ್ಸಾಹಿಸುವ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸುವ ಮೂಲಕ ಉದ್ಯಮವನ್ನು ಉತ್ತೇಜಿಸಲು ಚಿಂತನೆ ನಡೆಸಿದೆ. ಸುಂದರವಾದ ವಾತಾವರಣ, ಆಕರ್ಷಕ ಸ್ಟಾಲ್ ಗಳು, ಮತ್ತಷ್ಟು ಹೊತ್ತು ಕುಳಿತುಕೊಳ್ಳಬೇಕು ಎಂಬುವಂತ ಪರಿಸರ ಇದೆಲ್ಲದಕ್ಕೂ ಸಾಕ್ಷಿಯಾಗಿರುವುದು fun foods India. ಬೀದಿ ಬದಿಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೇ ಭಯದಲ್ಲಿಯೇ ವ್ಯಾಪಾರ ವಹಿವಾಟು ಮಾಡುತ್ತಿರುವ ಸ್ಥಳೀಯ ಉದ್ಯಮಿಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡಲು ಸುಮಾರು 20,000 ಚದರ ಅಡಿಯಲ್ಲಿ fun foods India ವೇದಿಕೆ ನಿರ್ಮಾಣವಾಗುತ್ತಿದೆ.
ಗ್ರಾಹಕರಿಗೆ ಬರ್ತ್ ಡೇ, ವಿವಾಹ ವಾರ್ಷಿಕೋತ್ಸವ ಹೀಗೆ ಯಾವುದೇ ಆಚರಣೆಗಳಿಗೂ ಉಚಿತವಾಗಿ ಸ್ಟೇಜ್ ಒದಗಿಸಲಾಗುತ್ತದೆ. ಮನರಂಜನೆಗೆ
ಮ್ಯೂಸಿಕ್, ಡ್ಯಾನ್ಸ್ ಆ್ಯಂಡ್ ಎಂಟರ್ಟೈನ್ಮೆಂಟ್ ಝೋನ್ ಮೂಲಕ ರಂಜಿಸಲಾಗುತ್ತದೆ. ಅಲ್ಲದೇ
ಹಿರಿಯ ನಾಗರಿಕರಿಗೆ ವಿಶೇಷ ಆಸನದ ವ್ಯವಸ್ಥೆ ಜೊತೆಗೆ ಜಾಗೃತಿ ವೇದಿಕೆಯ ಪರಿಕಲ್ಪನೆಯನ್ನು ಕೂಡ fun foods India ಹೊಂದಿದೆ. ಅಷ್ಟೇ ಅಲ್ಲದೇ ಮಕ್ಕಳ ಮನರಂಜನೆಗೆ ಮಕ್ಕಳಿಗೆ ಆಟ ಆಡಲು ವ್ಯವಸ್ಥೆ, ವಯಸ್ಕರಿಗೆ ಕೇರಮ್, ಚೆಸ್ ಸೇರಿದಂತ ಹತ್ತು ಹಲವಾರು ಒಳಾಂಗಣ ಆಟಗಳನ್ನು ಇಲ್ಲಿ ಒದಗಿಸಲಾಗುತ್ತದೆ. ಇನ್ನೂ ವಿಶೇಷ ಅಂದರೆ ಎಲ್ಲ ವಾಹನಗಳಿಗೂ ಪಾರ್ಕಿಂಗ್ ಸೇವೆ ಇರುವುದು ಸಹಜ ಆದರೇ ಸೈಕಲ್ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಿದ್ದು, ಪರಿಸರ ಸಂರಕ್ಷಣೆ ಉತ್ತೇಜಿಸುವ ಸದುದ್ದೇಶದಿಂದ ಸೈಕಲ್ ಮೂಲಕ ಆಗಮಿಸಿದವರಿಗೆ ಊಟದಲ್ಲಿ 10% ರಿಯಾಯಿತಿ ನೀಡಲು ಮುಂದಾಗಿದೆ.
ಭೇಟಿ ಮಾಡುವ ವಿಳಾಸ..
SF-10, 2ND FLOOR, AMJ BUSINESS PARK, CBT, DHARWAD-580001
CELL- 9902567227, 8088654313
Kshetra Samachara
08/11/2021 09:46 pm