ಹುಬ್ಬಳ್ಳಿ: ಟೈ ಹುಬ್ಬಳ್ಳಿ ವತಿಯಿಂದ ಅಕ್ಟೋಬರ್ 23 ರಂದು ಇನ್ಪ್ರಾ ಸಮ್ಮಿಟ್ ಅನ್ನು ನಗರದ ಡೆನಿಸನ್ಸ್ ಹೊಟೇಲ್‌ನಲ್ಲಿ ಆಯೋಜಿಸಲಾಗಿದೆ ಎಂದು, ಟೈ ಹುಬ್ಬಳ್ಳಿಯ ಅಧ್ಯಕ್ಷ ವಿಜೇಶ್ ಸೈಗಲ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, 'ಲೆಟ್ಸ್ ಬಿಲ್ಡ್ ನಾರ್ಥ್ ಕರ್ನಾಟಕ' ಎಂಬ ಗುರಿ ಉದ್ದೇಶದಿಂದ ಈ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಈ ಶೃಂಗಸಭೆ ಉತ್ತರ ಕರ್ನಾಟಕವನ್ನು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಂದ ಭವಿಷ್ಯದ ಮೂಲಸೌಕರ್ಯ ಹೂಡಿಕೆಯ ತಾಣವಾಗಿ ಪ್ರದರ್ಶಿಸಲು ವೇದಿಕೆಯಾಗಲಿದೆ ಎಂದರು.
ಅಂದು ಚುನಾಯಿತ ಪ್ರತಿನಿಧಿಗಳು, ಮೂಲ ಸೌಕರ್ಯ ಪರಿಣತರು ಮತ್ತು ಪರಿಸರ ವ್ಯವಸ್ಥೆಯ ಪಾಲುದಾರರ ಸಲಹೆಯೊಂದಿಗೆ ಉತ್ತರ ಕರ್ನಾಟಕದಲ್ಲಿ ವಿಶ್ವದರ್ಜೆಯ ಮೂಲ ಸೌಕರ್ಯಗಳನ್ನು ಒದಗಿಸುವ ಬೇಕಾದ ಉಪಕ್ರಮಗಳನ್ನು ಸಿದ್ದಪಡಿಸುವುದು ಮತ್ತು ನೀತಿ ಶಿಫಾರಸ್ಸುಗಳ ಬಗ್ಗೆ ಚರ್ಚಿಸಲಾಗುವುದು. ಸಚಿವರಾದ ಅಶ್ವತ್ಥ ನಾರಾಯಣ, ಶಾಸಕರಾದ ಅರವಿಂದ ಬೆಲ್ಲದ, ಐಎಎಸ್ ಅಧಿಕಾರಿ ಡಾ. ಇ.ವಿ.ರಾಮನ್ ರೆಡ್ಡಿ, ಅಶೋಕ ಶೆಟ್ಟರ್, ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಇನ್ನು ಮುಖ್ಯ ಭಾಷಣಕಾರರಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವ ಮುರುಗೇಶ ನಿರಾಣಿ, ಫೌಂಡೇಶನ್ ಫಾರ್ ಫ್ಯೂಚರಿಸ್ಟಿಕ್ ಸಿಟೀಸ್ ನ ಕರುಣಾ ಗೋಪಾಲ್, ಕೆಎಲ್ ಇ ಸೊಸೈಟಿಯ ಚೇರ್ಮನ್ ಡಾ.ಪ್ರಭಾಕರ ಕೋರೆ, ವಿಆರ್ ಎಲ್ ಗ್ರೂಪ್ ಚೇರ್ಮನ್ ಡಾ.ವಿಜಯ ಸಂಕೇಶ್ವರ, ವೋಲ್ವೋ ಗ್ರೂಪ್ ಇಂಡಿಯಾದ ಅಧ್ಯಕ್ಷ ಕಮಲ ಬಾಲಿ, ಐಎಎಸ್ ಅಧಿಕಾರಿ ದುರ್ಗಾ ಶಂಕರ, ಅರವಿಂದ ಬೆಳ್ಳಿಗೇರಿ, ಐಕಾಸ್ ಚಾರ್ಜ್, ಬಿಮಲ್ ಶರ್ಮಾ, ಡಾ.ರವಿಕುಮಾರ ಮೊದಲಿ, ಡಾ.ಎನ್.ಎಸ್.ನಾಗೇಶ, ಡಾ.ಭಾವೇಶ್ ಶಾಹ ಸೇರಿದಂತೆ ಮುಂತಾದವರು ಮಾತನಾಡಲಿದ್ದಾರೆ. ಆಸಕ್ತರು ವೆಬ್ ಸೈಟ್ infra.tiehubli.org ಅಲ್ಲಿ ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕು ಎಂದರು.
Kshetra Samachara
19/10/2021 01:40 pm