ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದೇಶಪಾಂಡೆ ಫೌಂಡೇಶನ್ ವತಿಯಿಂದ ಉದ್ಯಮಿ ಮೆಗಾ ಉತ್ಸವ

ಹುಬ್ಬಳ್ಳಿ: ದೇ‌ಶಪಾಂಡೆ ಫೌಂಡೇಶನ್, ಕಾಮಾಕ್ಷಿ ಮಹಿಳಾ ಮಂಡಳಿ ಹು-ಧಾ ಸಹಯೋಗದಲ್ಲಿ ಫೆ.19 ರಿಂದ 23 ರವರೆಗೆ ಐದು ದಿನಗಳ "ಉದ್ಯಮಿ ಮೆಗಾ ಉತ್ಸವ"ವನ್ನು ನಗರದ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಯೋಜಕರಾದ ರಾಜೇಶ್ವರಿ ಹೇಳಿದರು.

ಉದ್ಯಮಶೀಲತೆಯನ್ನು ರಚಿಸಿ, ನಾವೀನ್ಯತೆ, ಸಹಯೋಗ ಮತ್ತು ಸುಸ್ಥಿರತೆಯ ಮೂಲಕ ತಳಮಟ್ಟದ ಸಮಸ್ಯೆಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರಸ್ತುತ ವ್ಯವಸ್ಥೆಯನ್ನು ಉತ್ತೇಜಿಸಲು ದೇಶಪಾಂಡೆ ಫೌಂಡೇಶನ್ ನ ಎಂಇಡಿಪಿ ಪ್ರೋಗ್ರಾಂ ಅಡಿಯಲ್ಲಿ ವೋಕಲ್ ಫಾರ್ ಲೋಕಲ್ ಹೆಸರಿನಲ್ಲಿ ಮಾರ್ಕೆಟಿಂಗ್ ಬೆಂಬಲ ನೀಡುವ ಕ್ರಮವಾಗಿ ವಸ್ತು ಪ್ರದರ್ಶನ ಮತ್ತು ಮಾರಾಟವನ್ನು ಉದ್ಯಮಿ ಮೆಗಾ ಉತ್ಸವದಲ್ಲಿ ಕಾಣಲಿದೆ ಎಂದರು.

ಈ ಉತ್ಸವದಲ್ಲಿ ಕರ್ನಾಟಕದ ವಾಯುವ್ಯ ಪ್ರದೇಶದ ಎಲ್ಲ ಸಣ್ಣ ಉದ್ಯಮಿದಾರರು ಇದರಲ್ಲಿ ಭಾಗಿಯಾಗಿ, ಸುಮಾರು 100 ಕ್ಕೂ ಹೆಚ್ಚು ಸ್ಟಾಲ್ ಗಳ ಮೂಲಕ ಕರ್ನಾಟಕ, ತೆಲಂಗಾಣ ಮತ್ತು ಉತ್ತರ ಪ್ರದೇಶದ ಕುಶಲಕರ್ಮಿಗಳಿಂದ ತಯಾರಾದ ಅತ್ಯುತ್ತಮ ಶ್ರೇಣಿಯ ಬಟ್ಟೆ, ಆಹಾರ ಉತ್ಪನ್ನಗಳು, ಮನೆ, ಕಚೇರಿ ಅಲಂಕಾರಿಕ ವಸ್ತುಗಳು ಪ್ರದರ್ಶನದಲ್ಲಿ ಮಾರಾಟ ಮಾಡಲಾಗುವುದು ಎಂದರು.

Edited By : Manjunath H D
Kshetra Samachara

Kshetra Samachara

16/02/2021 12:25 pm

Cinque Terre

87.43 K

Cinque Terre

3

ಸಂಬಂಧಿತ ಸುದ್ದಿ