ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅವಶ್ಯಕತೆಗೆ ಸಾಲ ಪಡೆದು ಸಕಾಲಕ್ಕೆ ಪಾವತಿಸಲು ಬ್ಯಾಂಕ್ ನಿರ್ದೇಶಕರ ಕರೆ

ಕುಂದಗೋಳ : ಪ್ರಾಥಮಿಕ ಸಹಕಾರಿ ಗ್ರಾಮೀಣ ಅಭಿವೃದ್ಧಿ ಬ್ಯಾಕಿನಿಂದ ಸಾಲ ಪಡೆದ ಅರ್ಹ ರೈತರು ಸಕಾಲಕ್ಕೆ ಸಾಲವನ್ನು ಮರಳಿ ಪಾವತಿಸಿದರೇ ಮಾತ್ರ ಬ್ಯಾಂಕ್ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಪೀಕಾರ್ಡ್ ಬ್ಯಾಂಕ್ ನಿರ್ದೇಶಕ ಉಳುವಪ್ಪ ದಾಸನೂರು ಹೇಳಿದರು.

ಪಟ್ಟಣದ ಪಿ.ಎಲ್.ಡಿ ಬ್ಯಾಂಕ್ ಆವರಣದಲ್ಲಿ ಇತ್ತಿಚೆಗೆ ನಡೆದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಸಾಲ ಪಡೆಯಿರಿ ಬಳಿಕ ಅವಧಿ ಕಳೆಯದೇ ಸಕಾಲಕ್ಕೆ ಸಾಲ ಮರಳಿ ನೀಡಿರಿ ಎಂದರು. ಈ ವೇಳೆಯಲ್ಲಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಅರವಿಂದಪ್ಪ ಕಟಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಕೆ.ಆರ್.ಡಗಲಿ, ಪ್ರಕಾಶ್ ಕುಬಿಹಾಳ, ಶಂಕ್ರಪ್ಪ ಮೊರಬದ ಸೇರಿದಂತೆ ಸಂಘದ ಸದಸ್ಯರು ಪಟ್ಟಣದ ಪ್ರಮುಖರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

16/01/2021 12:41 pm

Cinque Terre

25.57 K

Cinque Terre

0

ಸಂಬಂಧಿತ ಸುದ್ದಿ