ಹುಬ್ಬಳ್ಳಿ: ನವೋದ್ಯಮಿಗಳಿಗೆ ಪ್ರೋತ್ಸಾಹ ನೀಡುವ ಸದುದ್ದೇಶದಿಂದ ದೇಶಪಾಂಡೆ ಸ್ಟಾಟ್‌ಅಪ್ ಸಾಕಷ್ಟು ಯೋಜನೆಯನ್ನು ರೂಪಿಸುತ್ತಿದೆ. ಈಗ ಮತ್ತಷ್ಟು ವಿನೂತನ ಕಾರ್ಯದ ಮೂಲಕ ನಿರುದ್ಯೋಗ ನಿವಾರಣೆಗೆ ಅಡಿಪಾಯ ಹಾಕಲು ದೇಶಪಾಂಡೆ ಸ್ಟಾಟ್‌ಅಪ್ ಮುಂದಾಗಿದೆ. ಈ ನಿಟ್ಟಿನಲ್ಲಿ MSME WEEK ಅಭಿಯಾನವನ್ನು ಹಮ್ಮಿಕೊಂಡಿದೆ.
ಹೌದು. ದೇಶಪಾಂಡೆ ಸ್ಟಾಟ್‌ಅಪ್‌ನವೋದ್ಯಮಕ್ಕೆ ಆರ್ಥಿಕ ಪ್ರೋತ್ಸಾಹದ ಹೊಸ ಮೈಲುಗಲ್ಲನ್ನು ಹಾಕಿದ್ದು, ಇದಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಾಯ ಕೂಡ ದೊರೆತಿದೆ. ಇನ್ನೂ ಹುಬ್ಬಳ್ಳಿಯ ದೇಶಪಾಂಡೆ ಸ್ಟಾಟ್‌ಅಪ್‌ನಲ್ಲಿ ಎಂಎಸ್ಎಂಇ ಸಹಯೋಗದೊಂದಿಗೆ ಪಿಎಂಇಜಿಪಿ ಕಾರ್ಯಕ್ರಮದ ಅಡಿಯಲ್ಲಿ ಖಾದಿ ಗ್ರಾಮೋದ್ಯೋಗ ಹಾಗೂ ಇನ್ನಿತರ ಉದ್ಯಮಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು. ಈಗಾಗಲೇ ಸಾಕಷ್ಟು ಸ್ಟಾಟ್‌ಅಪ್‌ಗಳಿಗೆ ಸೂಕ್ತ ವೇದಿಕೆ ಕಲ್ಪಿಸಿರುವ ದೇಶಪಾಂಡೆ ಫೌಂಡೇಶನ್ ಯುವ ಸಮುದಾಯಕ್ಕೆ ಪೂರಕವಾದ ಉದ್ಯಮದ ಜೊತೆಗೆ ಉದ್ಯೋಗ ಸೃಷ್ಟಿ ಕಾರ್ಯಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದೆ.
ಇನ್ನೂ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಅಗತ್ಯವಿರುವ ಬಂಡವಾಳದ ಬಗ್ಗೆ ಹಾಗೂ ಸ್ಟಾಟ್‌ಅಪ್ ಬೆಳವಣಿಗೆ ಬಗ್ಗೆ ಮಾಹಿತಿ ನೀಡಲಾಗಿದ್ದು, ಅವಳಿನಗರದ ಜನರು ಮಾತ್ರವಲ್ಲದೆ ಅಂತರರಾಜ್ಯದ ಉದ್ಯಮಿಗಳು ಭಾಗವಹಿಸಿ ಸೂಕ್ತ ಸಮಾಲೋಚನೆ ನಡೆಸಿದರು. ಅಲ್ಲದೇ ಅಹಮದಾಬಾದ್ ಉದ್ಯಮಿಯೊಬ್ಬರು ತಮ್ಮ ಸ್ಟಾರ್ಟಫ್ ಗೆ ದೇಶಪಾಂಡೆ ಫೌಂಡೇಶನ್ ನೀಡಿರುವ ಸಹಕಾರದ ಬಗ್ಗೆ ಏನ ಹೇಳಿದ್ದಾರೆ ಕೇಳಿ.
ಒಟ್ಟಿನಲ್ಲಿ ದೇಶಪಾಂಡೆ ಫೌಂಡೇಶನ್ ಹಾಗೂ ದೇಶಪಾಂಡೆ ಸ್ಟಾಟ್‌ಅಪ್ ಈಗಾಗಲೇ ಸಾಕಷ್ಟು ಉದ್ಯಮಗಳಿಗೆ ದಾರಿದೀಪವಾಗಿದ್ದು, ಈಗ ಎಂಎಸ್ಎಂಇ ವೀಕ್ ಮೂಲಕ ನವೋದ್ಯಮಿಗಳಿಗೆ ಮತ್ತಷ್ಟು ಪ್ರೋತ್ಸಾಹಕ್ಕೆ ಮುಂದಾಗಿರುವುದು ವಿಶೇಷವಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/07/2022 09:57 pm