ಕುಂದಗೋಳ : ಶಾಲೆ ಎಂದರೆ ಮುಖ ಕಿವುಚುವ ಮಕ್ಕಳು ಈಗ ಓಡೋಡಿ ಬರ್ತಾರೆ. ಅವರ ಆಕರ್ಷಣೆ ದೇಶಪಾಂಡೆ ಫೌಂಡೇಶನ್ ಆಯೋಜಿಸಿದ Skill In Village ಕಾರ್ಯಕ್ರಮ.
ಅರೆ, ಏನ್ರೀ ಸ್ಕಿಲ್ ಕಾರ್ಯಕ್ರಮ ಅಂದ್ರೇ ಮಕ್ಕಳಿಗೆ ಅಷ್ಟು ಇಷ್ಟನಾ ? ಹೌದು...ಮಕ್ಕಳಿಂದ ಭರ್ತಿಯಾದ ಕ್ಲಾಸ್ ಗಳೇ ಸಾಕ್ಷಿ.
ಇಂಗ್ಲೀಷ್ ಭಾಷೆ ಭಯ ತೊಲಗಿಸಿ, ಅದನ್ನು ಹೇಗೆ ಸರಳವಾಗಿಸಿಕೊಳ್ಳಬಹುದು ಎಂಬ ತಿಳಿವಳಿಕೆ ನೀಡುವುದೆ ಸ್ಕಿಲ್ ಇನ್ ವಿಲೇಜ್ ಉದ್ದೇಶ. ಶಾಲಾ ಅವಧಿ ಹೊರತಾಗಿ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. ಫೌಂಡೇಶನ್ ನಿಯೋಜಿತ ಶಿಕ್ಷಕಿ ನಯನಾ ಬಳಿಗಾರ್.... ಮಕ್ಕಳನ್ನು ಶಿಕ್ಷಣದಲ್ಲಿ ಸ್ಮಾರ್ಟ್ ಮಾಡಿದ್ದಾರೆ.
ನೋಡ ಬನ್ನಿ ಕುಂದಗೋಳ ತಾಲೂಕು ಯರಗುಪ್ಪಿ ಸರ್ಕಾರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ಮಕ್ಕಳ ಕಮ್ಯುನಿಕೇಶನ್, ಲೈಫ್ ಸ್ಕಿಲ್.
ಇಂಗ್ಲಿಷ್ ಸಂವಹನ ಜೊತೆ ಆಂಗಿಕ ಭಾಷೆ ರೂಢಿಸಿಕೊಂಡಿರುವ ಇವರು ಯಾವುದೇ ಆಂಗ್ಲ ಮಾಧ್ಯಮದ ಮಕ್ಕಳಿಗೆ ಕಡಿಮೆ ಇರದ ಜ್ಞಾನ ಹೊಂದಿದ್ದಾರೆ. ಈ ಜ್ಞಾನಕ್ಕೆ ಪಾಲಕರ ಪ್ರೋತ್ಸಾಹವೇ ಸಾಕ್ಷಿ.
2017 ರಲ್ಲಿ ಆರಂಭವಾದ ಈ ಸ್ಕಿಲ್ ಕ್ಲಾಸ್... ಶಿಕ್ಷಕರ ಹಾಗೂ ಮಕ್ಕಳ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಇಲ್ಲಿ 5 ರಿಂದ 9 ತರಗತಿ ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ ಯೋಗಾಭ್ಯಾಸ ಸಹ ನಿರಂತರವಾಗಿದೆ.
ಸ್ಕಿಲ್ ಕಾರ್ಯಕ್ರಮ ಮಕ್ಕಳ ಮನೋಸ್ಥೈರ್ಯ ತುಂಬುತ್ತಿದೆ ಎಂದರಲ್ಲಿ ಎರಡು ಮಾತಿಲ್ಲ.
ಸ್ಪರ್ಧಾ ಜಗತ್ತಿಗೆ ತೆರೆದುಕೊಳ್ಳಲು ಅವಕಾಶ ಕಲ್ಪಿಸುವ ನಿಮ್ಮೂರಲ್ಲೇ ನಿಮ್ಮ ಸರ್ಕಾರಿ ಶಾಲೆಯಲ್ಲೇ ಸ್ಕಿಲ್ ಕ್ಲಾಸ್ ಲಭ್ಯ. ಹೆಚ್ಚಿನ ಮಾಹಿತಿಗೆ 7353855883 ಕರೆ ಮಾಡಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/04/2022 08:45 pm