ಸ್ನೇಹಿತರ ಶೇಕ್ ಹ್ಯಾಂಡ್ ನಿಂದ ಸಕ್ಸಸ್ ಕಂಡ ಪ್ರಸಾದ ಶೆಟ್ಟಿ, ಪ್ರಶಾಂತ ಶೆಟ್ಟಿ: ಸ್ನೇಹ ಜೀವಿ ಈ ಸಾಧಕರು
ಹುಬ್ಬಳ್ಳಿ: ಗೆಳೆತನ ಅಂದರೆ ಅದು ಇವತ್ತು ನಿನ್ನೆಯ ಮಾತಲ್ಲ. ರಾಮಾಯಣ ಮಹಾಭಾರತ ಕಾಲದಿಂದಲೂ ಗೆಳೆತನದ ಬೆಸುಗೆಗೆ ತನ್ನದೇ ಆದ ಮಹತ್ವವಿದೆ. ಇಂತಹ ಗೆಳೆತನದಲ್ಲಿಯೇ ಜೊತೆಗೂಡಿ ಬೆಳೆದು ಇಂದು ಸಾಧಕರಾಗಿದ್ದಾರೆ. ಹಾಗಿದ್ದರೇ ಯಾರು ಆ ಸಾಧಕ ವ್ಯಕ್ತಿಗಳು ಅಂತ ನಿಜಕ್ಕೂ ವಿಚಾರ ಮಾಡುತ್ತಿದ್ದೀರಾ ಅಲ್ವ ಅವರೇ ನಿಮ್ಮೆಲ್ಲರ ನೆಚ್ಚಿನ ಪ್ರಸಾದ ಶೆಟ್ಟಿ ಹಾಗೂ ಪ್ರಶಾಂತ ಶೆಟ್ಟಿ.
ಒಂದು ಒಳ್ಳೆಯ ಪುಸ್ತಕ ಇದ್ದರೇ ಒಬ್ಬ ಗೆಳೆಯನಂತೆ. ಅದೇ ಒಬ್ಬ ಒಳ್ಳೆಯ ಗೆಳಯನಿದ್ದರೇ ಒಂದು ವಿಶ್ವವಿದ್ಯಾಲಯದಂತೆ ಎಂಬ ಮಾತು ಅಕ್ಷರಶಃ ಸತ್ಯ. ಇಂತಹ ಗೆಳೆಯರೊಂದಿಗೆ ಬಾಂಧವ್ಯ ಬೆಸೆದುಕೊಂಡು ಹುಬ್ಬಳ್ಳಿಯಲ್ಲಿ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡುವ ಮೂಲಕ ಸಾಧಕ ಉದ್ಯಮಿಯಾಗಿ ಹೊರ ಹೊಮ್ಮಿದ್ದಾರೆ. ಹೌದು. ಮೂಲತಃ ಬ್ರಹ್ಮಾವರ ಎಡತಾಡಿ ಗ್ರಾಮದವರಾದ ಪ್ರಸಾದ ಶೆಟ್ಟಿ ಹಾಗೂ ಪ್ರಶಾಂತ ಶೆಟ್ಟಿಯವರು, 4ನೇ ತರಗತಿಯಲ್ಲಿ ಇರುವಾಗಲೇ ಬರಿ ಕೈಯಲ್ಲಿ ಹುಬ್ಬಳ್ಳಿಗೆ ಬಂದು ಪರಿಶ್ರಮದ ಮೂಲಕ ಬಹುದೊಡ್ಡ ಸ್ನೇಹ ಸಾಮ್ರಾಜ್ಯವನ್ನೇ ನಿರ್ಮಾಣ ಮಾಡಿದ್ದಾರೆ. ತಂದೆ ಕುಶಾಲ್ ಅಣ್ಣಪ್ಪ ಶೆಟ್ಟಿ ಹಾಗೂ ತಾಯಿ ಪಾರ್ವತಿ ಶೆಟ್ಟಿಯವರ ಮಕ್ಕಳಾದ ಪ್ರಸಾದ ಶೆಟ್ಟಿ, ಪ್ರಶಾಂತ ಶೆಟ್ಟಿಯವರು ಸಾಕಷ್ಟು ನೋವು, ಸೋಲುಗಳನ್ನು ಅನುಭವಿಸಿ ಈಗ ಬಹುದೊಡ್ಡ ಉದ್ಯಮಿಯಾಗಿ ಹೊರ ಹೊಮ್ಮಿದ್ದಾರೆ.
ಪ್ರಸಾದ ಶೆಟ್ಟಿ ಹಾಗೂ ಪ್ರಶಾಂತ ಶೆಟ್ಟಿಯವರ ಕೈಯಲ್ಲಿ ಒಂದು ರೂಪಾಯಿ ಕಾಸು ಇಲ್ಲದೆಯೇ ಹುಬ್ಬಳ್ಳಿಗೆ ಬಂದು ತಮ್ಮ 35 ವರ್ಷದ ಹುಬ್ಬಳ್ಳಿ ಜರ್ನಿಯಲ್ಲಿ ಸಾಕಷ್ಟು ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿದ್ದಾರೆ. ತಂದೆಯ ಕಿರವತ್ತಿಯಲ್ಲಿನ ಟಿಂಬರ್ ಮತ್ತು ಹೊಟೇಲ್ ಬ್ಯುಸಿನೆಸ್ ಮೂಲಕ ಸಾಕಷ್ಟು ವ್ಯವಹಾರಿಕ ಜ್ಞಾನ ಪಡೆದ ಪ್ರಸಾದ ಶೆಟ್ಟಿ ಹಾಗೂ ಪ್ರಶಾಂತ ಶೆಟ್ಟಿಯವರು, ರೂಪಶ್ರೀ ಹೊಟೇಲ್ ನಿಂದ ಹೊಟೆಲ್ ಬ್ಯುಸಿನೆಸ್ ಆರಂಭ ಮಾಡಿದರು. ಅಲ್ಲದೇ ಸಾಕಷ್ಟು ಉದ್ಯಮದಲ್ಲಿ ತೊಡಗಿಕೊಂಡು ಸಕ್ಸಸ್ ಬ್ಯುಸಿನೆಸ್ ಮೆನ್ ಆಗಿ ಹೊರಹೊಮ್ಮಿದ್ದಾರೆ.
ಇನ್ನೂ ಪ್ರಸಾದ ಆ್ಯಂಡ್ ಪ್ರಶಾಂತ ಶೆಟ್ಟಿಯವರು, ಐದು ಜನ ಸಹೋದರರು. ಪ್ರಕಾಶ ಶೆಟ್ಟಿ, ಪ್ರಸಾದ ಮತ್ತು ಪ್ರಶಾಂತ , ಪ್ರದೀಪ, ಹರ್ಷ ಹೀಗೆ ಮಧ್ಯಮ ಪಾಂಡವರಾಗಿ ಪ್ರಸಾದ ಶೆಟ್ಟಿಯವರು ತಮ್ಮ ಜವಾಬ್ದಾರಿ ನಿಭಾಯಿಸುತ್ತ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಇವರ ಎಲ್ಲ ಸಾಧನೆಗೆ ಇವರ ಸ್ನೇಹಿತರೇ ಸ್ಪೂರ್ತಿಯಂತೆ..
ಇನ್ನೂ ಲೇಬರ್ ಕಾಂಟ್ರಾಕ್ಟ್ (ಭರತ್ ಡಿಟೆಕ್ಟಿವ್ ಏಜೆನ್ಸಿ & ಸೆಕ್ಯುರಿಟಿ ಸರ್ವಿಸ್) ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡಿ ನೂರಾರು ಕುಟುಂಬಕ್ಕೆ ಆಸರೆಯಾಗಿದ್ದಾರೆ ಪ್ರಸಾದ ಶೆಟ್ಟಿಯವರ. ತಮ್ಮ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ಕೈ ಬಿಟ್ಟಿದ್ದು, ಈಗ ಯಾರಾದರೂ ಓದಲು ಸಹಾಯ ಬೇಡಿ ಬಂದರೇ ಅವರಿಗೆ ಸಹಾಯ ಹಸ್ತ ನೀಡುವ ಶಿಕ್ಷಣ ಪ್ರೇಮಿ ಇವರು. ನಾನು ಓದದೇ ಇದ್ದರೇ ಏನಾಯಿತು ಓದುವವರಿಗಾದರೂ ಸಹಾಯ ಮಾಡೋಣ ಎನ್ನುವಂತೆ ಸಾಕಷ್ಟು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗಿದ್ದಾರೆ. ಇವರಲ್ಲಿ ಸಹಾಯ ಪಡೆದ ಬಹುತೇಕ ವಿದ್ಯಾರ್ಥಿಗಳು Rank ಪಡೆದುಕೊಂಡು ಭಾರತದ ಉತ್ತಮ ಪ್ರಜೆಯಾಗಿರುವುದು ನಿಜಕ್ಕೂ ವಿಶೇಷ.
ಇನ್ನು ಪ್ರಸಾದ ಶೆಟ್ಟಿ ಹಾಗೂ ಪ್ರಶಾಂತ ಶೆಟ್ಟಿಯವರು ಎಂದಿಗೂ ಕೂಡ ನಿಂತ ನೀರಾಗಿ ಉಳಿದ ವ್ಯಕ್ತಿಗಳೆ ಅಲ್ಲ. ದಿನವೂ, ಆವಿಷ್ಕಾರ ಹೊಸತನ್ನು ಹುಡುಕುತ್ತ ಹೊರಟ ಉದ್ಯಮ ಮಾಂತ್ರಿಕ. ರಿಯಲ್ ಎಸ್ಟೇಟ್ ಬ್ಯುಸಿನೆಸ್ ಹಾಗೂ ಸಹೋದರ ಪ್ರಶಾಂತ ಅವರಿಗೆ ಹಾಸನದಲ್ಲಿ ಟ್ರ್ಯಾಕ್ಟರ್ ಶೋರೂಮ್ ಶ್ರೀ ಚಾಮುಂಡೇಶ್ವರಿ ಎಂಟರ್ಪ್ರೈಸ್, ಮೈನಿಂಗ್ ಬ್ಯುಸಿನೆಸ್, ಬ್ಯಾಂಕಿಂಗ್ ಕಲೆಕ್ಷನ್ ಏಜೆನ್ಸಿ ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಎಂಬುವಂತ ತಮ್ಮ ಸಣ್ಣ ವಯಸ್ಸಿನಲ್ಲಿಯೇ ಬಹುದೊಡ್ಡ ಉದ್ಯಮಿಯಾಗಿ ಹೊರ ಹೊಮ್ಮಿದ್ದಾರೆ.
ಎತ್ತಣ ಮಾಮರ.. ಎತ್ತಣ ಕೋಗಿಲೆ ಎಂಬಂತೆ ಬ್ರಹ್ಮಾವರದಿಂದ ಹುಬ್ಬಳ್ಳಿಯವರೆಗಿನ ನಂಟು ಈಗ ದೇಶವ್ಯಾಪಿ ಹರಡುತ್ತಿದೆ. ಅಲ್ಲದೇ ಯಾರಾದರೂ ಹಸಿವು ಎಂದಾಕ್ಷಣ ತಮ್ಮಲ್ಲಿರುವ ಒಂದು ತುತ್ತನ್ನು ಕೊಡುವ ಕರುಣಾಮಯಿ ಯಾವುದೇ ಆಸೆಗಳಿಲ್ಲದೇ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವುದು ನಿಜಕ್ಕೂ ಶ್ವಾಘನೀಯ.
ಇನ್ನೂ ರೋಗಿಗಳಿಗೆ ಔಷಧ ವಿತರಣೆ, ರಕ್ತದಾನ ಶಿಬಿರ, ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಆಹಾರ ಕಿಟ್ ವಿತರಣೆ, ಜನ್ಮದಿನದ ಅಂಗವಾಗಿ ಹಾಗೂ ಯಾವುದೇ ಸಂದರ್ಭದಲ್ಲಿಯೂ ದೇವಸ್ಥಾನದ ಹಾಗೂ ಧಾರ್ಮಿಕ ಕಾರ್ಯಗಳಿಗೆ ಅನ್ನಸಂತರ್ಪಣೆ ನಡೆಸಿಕೊಂಡು ಬಂದಿದ್ದಾರೆ. ಸುಮಾರು 10-15 ವರ್ಷಗಳಿಂದ ಸಾಮಾಜಿಕ ಕಾರ್ಯ ಮಾಡುತ್ತ ಬಂದಿರುವ ಈ ಜನನಾಯಕ ಈಗ ಸಾರ್ವಜನಿಕರ ಸೇವೆಗಾಗಿ ಪಿಕೆಎಸ್ ಫೌಂಡೇಶನ್ ಎನ್.ಜಿ.ಒ ಮಾಡಲು ನಿರ್ಧಾರ ಮಾಡಿದ್ದಾರೆ. ಇನ್ನೂ ಹಸಿರು ಶಾಲು ಕಂಡರೇ ಇವರಿಗೆ ಎಲ್ಲಿಲ್ಲದ ಪ್ರೇಮ. ಅನ್ನದಾತ ರೈತನನ್ನೇ ಆರಾಧ್ಯದೈವ ಎಂದುಕೊಂಡು ರೈತರ ಪ್ರತಿಯೊಂದು ಹೋರಾಟದಲ್ಲಿ ಕೈ ಜೋಡಿಸಿದ್ದಾರೆ. ಅಲ್ಲದೇ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಡ ರೈತರ ಅಕೌಂಟ್ ಗಳಿಗೆ ಸುಮಾರು 2500 ರೂಪಾಯಿ ಧನಸಹಾಯದ ಚೆಕ್ ನ್ನು ರೈತರ ಖಾತೆಗೆ ಹಾಕುವ ಮೂಲಕ ಅನ್ನದಾತನಿಗೆ ಆಸರೆಯಾಗಿದ್ದಾರೆ. ಈಗಾಗಲೇ ನೂರಾರು ಜನ ರೈತರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ.
ಇನ್ನು ಪ್ರತಿಯೊಂದು ಸಾಧನೆಗೆ ಸ್ನೇಹ ಬಳಗವೇ ಶಕ್ತಿ ಎನ್ನುವ ಪ್ರಸಾದ ಶೆಟ್ಟಿ, ಪ್ರಶಾಂತ ಶೆಟ್ಟಿಯವರು, ಯಾವುದೇ ರಾಜಕೀಯ ಸೋಂಕಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಸಾಧಕ ಸಮಾಜ ಸೇವಕರ ಹುಡುಕಾಟದಲ್ಲಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಮುಂಚೂಣಿಯಲ್ಲಿದ್ದು, ಪ್ರಸಾದ ಶೆಟ್ಟಿ ಹಾಗೂ ಪ್ರಶಾಂತ ಶೆಟ್ಟಿಯವರಂತಹ ಸಾಧಕ ಜೀವಿಗಳಿಗೆ ದೇವರು ಮತ್ತಷ್ಟು ಶಕ್ತಿಯನ್ನು ನೀಡಲಿ ಎಂದು ಆಶಿಸುತ್ತೇವೆ.
Kshetra Samachara
14/10/2021 02:07 pm