ಧಾರವಾಡ: ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿ ಬೆಳೆ ಹಾನಿ ಸಂಭವಿಸಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದು, ಹಾಲು ಉತ್ಪಾದಕ ರೈತರಿಗೆ ಹಾಲು ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳವಾಗಿದ್ದು, ಒಕ್ಕೂಟದ ಆರ್ಥಿಕ ಸ್ಥಿತಿಗತಿಗಳನ್ನು ಅನುಸರಿಸಿ, ಹಾಲಿನ ಶೇಖರಣಾ ದರವನ್ನು ಹೆಚ್ಚಳ ಮಾಡಲು ನಿನ್ನೆ ಜರುಗಿದ ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲೆಯ ಒಕ್ಕೂಟದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಧಾರವಾಡ ಕೆಎಂಎಫ್ ಅಧ್ಯಕ್ಷ ಶಂಕರ ವೀರಪ್ಪ ಮುಗದ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪರಿಷ್ಕೃತ ಹಾಲಿನ ದರವು ಅಕ್ಟೋಬರ್ 01 ರಿಂದ ಜಾರಿಗೆ ಬಂದಿದೆ. ಆಕಳು ಹಾಗೂ ಎಮ್ಮೆಯ ಪ್ರತಿ ಲೀಟರ್ ಹಾಲಿಗೆ 1 ರೂಪಾಯಿಗಳಂತೆ ಹೆಚ್ಚಿಸಿ ಹಾಲು ಶೇಖರಿಸಲಾಗುತ್ತಿದೆ.
3.5 ರಷ್ಟು ಜಿಡ್ಡು ಇರುವ ಪ್ರತಿ ಲೀಟರ್ ಆಕಳ ಹಾಲಿಗೆ 26 ರೂಪಾಯಿಗಳಂತೆ ಮತ್ತು ಸರ್ಕಾರದ ಪ್ರೋತ್ಸಾಹಧನ 5 ರೂಪಾಯಿ ಸೇರಿ ಒಟ್ಟು 31 ರೂಪಾಯಿ ಹಾಗೂ ಶೇ.6 ರಷ್ಟು ಜಿಡ್ಡು ಇರುವ ಪ್ರತಿ ಲೀಟರ್ ಎಮ್ಮೆ ಹಾಲಿಗೆ 41 ರೂಪಾಯಿ ಮತ್ತು ಸರ್ಕಾರದ ಪ್ರೋತ್ಸಾಹಧನ 5 ರೂಪಾಯಿ ಸೇರಿ ಒಟ್ಟು 46 ರೂಪಾಯಿಗಳು ಹಾಲು ಉತ್ಪಾದಕರಿಗೆ ದೊರೆಯಲಿದೆ.
ಇದರ ಪ್ರಯೋಜನವನ್ನು ಎಲ್ಲ ಹಾಲು ಉತ್ಪಾದಕರು ಪಡೆದುಕೊಳ್ಳಬೇಕೆಂದು ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲೆಯ ಒಕ್ಕೂಟದ ಅಧ್ಯಕ್ಷ ಶಂಕರ ವೀರಪ್ಪ ಮುಗದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/10/2022 03:31 pm