ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಬಹು ಜನಪ್ರಿಯ ಬಜೆಟ್ ಆಗಿದ್ದು, ಒಟ್ಟಾರೆಯಾಗಿ ಅಭಿವೃದ್ಧಿ ಹಿತದೃಷ್ಟಿಯಿಂದ ಸ್ವಾಗತಾರ್ಹವಾಗಿದೆ. ರಾಜ್ಯದ ಅಭಿವೃದ್ಧಿಗೆ ಹೇಳಿ ಮಾಡಿಸಿದ ಬಜೆಟ್ ಇದಾಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿನಯ ಜವಳಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೃಷಿ, ಎಂಎಸ್ಎಂಇ, ಉದ್ಯೋಗ, ರೈಲ್ವೆ ಹಾಗೂ ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ಬಜೆಟ್ ಇದಾಗಿದೆ ಎಂದರು.
ಮಹದಾಯಿ, ಮೇಕೆದಾಟು ಹಾಗೂ ನೀರಾವರಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಈಗ ಮಹದಾಯಿಗೆ 1000 ಕೋಟಿ ಮೀಸಲು ಇಟ್ಟಿದ್ದಾರೆ. ಈ ಭಾಗದ ಬೇಡಿಕೆ ಸ್ಪಂದಿಸಿರುವುದು ರಾಜ್ಯದ ಜನರ ಆಶಯಕ್ಕೆ ಸ್ಪಂದನೆ ನೀಡಿದಂತಾಗಿದೆ ಎಂದು ಅವರು ಹೇಳಿದರು.
Kshetra Samachara
04/03/2022 06:37 pm