ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫೀಸ್ ಹೆಸರಲ್ಲಿ ಪಾಲಕರಿಗೆ ಎಚ್ಚರಿಕೆ ನೀಡುತ್ತಿರುವ ಖಾಸಗಿ ಶಾಲೆಗಳು

ಹುಬ್ಬಳ್ಳಿ: ಲಾಕ್ ಡೌನ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪಾಲಕರಿಗೆ ಈಗ ಶಾಲಾ ಆಡಳಿತ ಮಂಡಳಿ ಮತ್ತಷ್ಟು ಒತ್ತಡವನ್ನು ಹೇರುತ್ತಿದೆ.ಶಾಲೆ ಬಾಗಿಲನ್ನು ತೆರೆಯಲು ಸರ್ಕಾರ ಯಾವುದೇ ನಿರ್ದೇಶನ ನೀಡದಿದ್ದರೂ ಕೂಡ ಶಾಲಾ ಆಡಳಿತ ಮಂಡಳಿ ಶಾಲೆಯ ಶುಲ್ಕವನ್ನು ಪಾವತಿಸಲು ಒತ್ತಾಯಿಸುವ ಮೂಲಕ ವಿದ್ಯಾರ್ಥಿಗಳ ಅಭ್ಯಾಸದ ಹಿನ್ನಡೆಯಾದರೇ ಪಾಲಕರೇ ಹೊಣೆ ಎಂದು ಹೊಸ ಕ್ಯಾತೆ ತೆಗೆದಿದೆ.

ಹೌದು..ಹುಬ್ಬಳ್ಳಿಯ ಖಾಸಗಿ ಶಾಲೆಯೊಂದು ವಿದ್ಯಾರ್ಥಿಗಳ ಫೀಸ್ ತುಂಬಲು ಒತ್ತಡ ಹೇರುತ್ತಿದ್ದಾರೆ ಎಂದ ಪಾಲಕರೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಕೋವಿಡ-19 ಬಂದಿರುವ ಹಿನ್ನೆಲೆಯಿಂದ ಎಲ್ಲ ವಿದ್ಯಾರ್ಥಿಗಳಿಗೆ 50% ಫೀಸನ್ನು ಕಟ್ಟಲು ಹೇಳಲಾಗಿತ್ತು. ಆಡಳಿತ ಮಂಡಳಿಯವರು ಅಗಸ್ಟವರೆಗೂ ಹಣ ಪಾವತಿಸಲು ಅನುಮತಿ ನೀಡಿದ್ದರು. ನಿಮಗೆ ಮೇಲಿಂದ ಮೇಲೆ ಫೀಸ್ ಕಟ್ಟಲು ವಿನಂತಿಸಿಕೊಂಡರೂ ಕಟ್ಟಿಲ್ಲ.

ಆದರೂ ಎಲ್ಲ ಶಿಕ್ಷಕರು ಮಕ್ಕಳಿಗೆ ನೋಟ್ಸ್, ವೀಡಿಯೋಗಳ ಮುಖಾಂತರ ಎಲ್ಲ ಪಾಠಗಳನ್ನು ಮಾಡುತ್ತಿದ್ದಾರೆ. ಪರೀಕ್ಷೆಗಳನ್ನು ನಡೆಸಲಾಗಿದೆ. ಮೇಲಿಂದ ಮೇಲೆ ಮೆಸೆಜ್ ಕಳಿಸಿದರೂ ಇಲ್ಲಿಯವರೆಗೆ ಕೆಲವು ಪಾಲಕರು ಶಾಲೆಗೆ ಭೇಟಿ ನೀಡಿ ವಿಚಾರಿಸಿಲ್ಲ. ಆದ್ದರಿಂದ 25/11/2020 ರೊಳಗೆ ನಿಮ್ಮ ಮಗುವಿನ ಫೀಸ್ ತುಂಬಿಲ್ಲ ಎಂದಾದಲ್ಲಿ ಯಾವುದೇ ಅಭ್ಯಾಸ ಕಳಿಸಲಾಗುವುದಿಲ್ಲ. ನಿಮ್ಮ ಮಗುವಿನ ಅಭ್ಯಾಸದ ಹಿನ್ನಡೆಗೆ ಪಾಲಕರೇ ಜವಾಬ್ದಾರರಾಗುತ್ತೀರಿ ಎಂಬುವಂತ ಎಚ್ಚರಿಕೆ ಸಂದೇಶವನ್ನು ಕಳಿಸಿದ್ದು,ಪಾಲಕರಲ್ಲಿ ಆತಂಕ ಸೃಷ್ಟಿಸಿದೆ.

ಒಟ್ಟಿನಲ್ಲಿ ಲಾಕ್ ಡೌನ್ ಸಡಿಲಿಕೆ ಬಳಿಕ ಕೊಂಚ ಚೇತರಿಸಿಕೊಳ್ಳುತ್ತಿರುವ ಪಾಲಕರಿಗೆ ಖಾಸಗಿ ಶಾಲೆಗಳು ಫೀಸ್ ಹೆಸರಿನಲ್ಲಿ ಮತ್ತಷ್ಟು ಆರ್ಥಿಕ ಸಂಕಷ್ಟ ತಂದೊಡ್ಡುತ್ತಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

20/11/2020 05:34 pm

Cinque Terre

25.9 K

Cinque Terre

7

ಸಂಬಂಧಿತ ಸುದ್ದಿ