ಕುಂದಗೋಳ: ಕೊರೊನಾ ಕಾರಣದಿಂದಾಗಿ ಕಳೆದೆರಡು ವರ್ಷದಿಂದ ಮಂಕಾಗಿದ್ದ ಹೋಳಿ ಹುಣ್ಣಿಮೆ ಹಬ್ಬ ಈ ವರ್ಷ ಬೊಂಬಾಟ್ ಕಲರ್ ಫುಲ್ ಆಗಿ ಆಚರಣೆಗೊಳ್ಳಲಿದೆ.
ಹೌದು, ಹೋಳಿ ಹುಣ್ಣಿಮೆಯ ಕಾಮದಹನ ಹಬ್ಬಕ್ಕೆ ಇಂದು ಕುಂದಗೋಳ ಪಟ್ಟಣದ ಬುಧವಾರದ ಸಂತೆಯಲ್ಲಿ ಹಳ್ಳಿಗರು ತಮ್ಮ ಮಕ್ಕಳಿಗೆ ಬಣ್ಣ, ತಮಟೆ, ಮುಖವಾಡ, ಪಿಪಿ ಇತ್ಯಾದಿ ಆಟಿಕೆ ಖರೀದಿಸುವ ಉತ್ಸಾಹದ ನೋಟ ಕಂಡು ಬಂತು.
ಇನ್ನು, ಕಾಮಣ್ಣನಿಗೆ ಅರ್ಪಿಸುವ ಬಾಸಿಂಗ ಹಾಗೂ ಮಕ್ಕಳ ಕೊರಳಲ್ಲಿ ಹಾಕುವ ಸಕ್ಕರೆ ಸರಗಳಿಗೂ ಬೇಡಿಕೆ ಹೆಚ್ಚಿದ್ದು, ಡಲ್ ಆಗಿದ್ದ ವ್ಯಾಪಾರ ಚಟುವಟಿಕೆ ತುಸು ಚೇತರಿಸಿದೆ.
ಇದಲ್ಲದೆ, ಬಣ್ಣದಾಟದ ಒಂದಕ್ಕಿಂತ ಒಂದು ವಿಭಿನ್ನ ಎನಿಸುವ ಸಾಮಗ್ರಿಗಳು ಮಕ್ಕಳನ್ನು ಸೆಳೆಯುವ ಚಿತ್ರಣ ಒಂದೆಡೆ ಕಂಡು ಬಂದರೆ, ಶಾಂತಿಯುತ ಹೋಳಿ ಹಬ್ಬ ಆಚರಣೆಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕರ್ತವ್ಯದಲ್ಲಿ ಪೊಲೀಸರು ನಿರತರಾಗಿದ್ದರು.
Kshetra Samachara
16/03/2022 10:56 pm