ಕುಂದಗೋಳ : ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತನ್ನ ಸಿಬ್ಬಂದಿಗಳಿಗೆ ಸಂಬಳ ನೀಡುವ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ.
ವಾರ್ಷಿಕ ಒಂದು ಲಕ್ಷ ರೂಪಾಯಿ ವರಮಾನ ಗಳಿಸಲಾಗದ ಹಂತಕ್ಕೆ ತಲುಪಿದೆ.
ಈ ಹಿಂದೆ ಇದೇ ಕೃಷಿ ಉತ್ಪನ್ನ ಮಾರುಕಟ್ಟೆ 2019-20 ರ ವರೆಗೆ ವಾರ್ಷಿಕ 60 ರಿಂದ 70 ಲಕ್ಷದವರೆಗೆ ವರ್ತಕರ ಸೆಸ್ ಮೇಲೆ ಆದಾಯ ಪಡೆಯುತಿತ್ತು, ಆದರೆ ಇದೀಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಯಾವುದೇ ವಹಿವಾಟು ನಡೆಯದ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತನ್ನ ಭದ್ರತಾ ಠೇವಣಿ ಖರ್ಚು ಮಾಡುತ್ತಾ ಕೂತಿದೆ.
ಇದಲ್ಲದೆ ಕೃಷಿ ಉತ್ಪನ್ನ ಮಾರುಕಟ್ಟೆಯ ಅಭಿವೃದ್ಧಿಗೆ ಸರ್ಕಾರದಿಂದ ದೊರಕಬೇಕಾದ ಡಬ್ಲೂಐಎಫ್ ಫಂಡ್, ಆರ್.ಐ.ಡಿ.ಎಫ್ ಫಂಡ್ ಸಹ ಕಳೆದ ಹಲವು ವರ್ಷಗಳಿಂದ ಇಲಾಖೆ ಬಂದಿಲ್ಲಾ, ಸಧ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿ, ಸಿಬ್ಬಂದಿಗಳು ಕೆಲಸವಿಲ್ಲದೆ ಕೂರುವ ಸ್ಥಿತಿ ನಿರ್ಮಾಣವಾಗಿದೆ.
ಮುಂದಿನ ದಿನಗಳಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಜಾಗದಲ್ಲಿ ಲೀಸ್ ಕಮ್ ಸೇಲ್ ಆಧಾರದ ಮೇಲೆ 24 ಮಳಿಗೆಗಳು ಲೈಸೆನ್ಸ್ ಹೊಂದಿದ ವರ್ತಕರಿಗೆ ಒಳಪಡುತ್ತಿದ್ದು, ಆ ಸಮಯದಲ್ಲಿ ರೈತರಿಂದ ವಹಿವಾಟು ನಡೆದ್ರೇ ಮಾತ್ರ ಮಾರುಕಟ್ಟೆ ಆದಾಯದ ಮೂಲ ಚಿಗುರಲಿದೆ.
ಒಟ್ಟಿನಲ್ಲಿ ರೈತರ ಅಭಿವೃದ್ಧಿಗೆ ಮುಂದಾಗ ಬೇಕಾದ ಕೃಷಿ ಉತ್ಪನ್ನ ಮಾರುಕಟ್ಟೆ ಈ ರೀತಿ ಬೀಕೋ ಎನ್ನುತ್ತಾ ಅಭಿವೃದ್ಧಿ ಗಳಿಗೆಗಾಗಿ ಕಾಯುತ್ತಿದೆ.
-ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
16/02/2022 09:49 pm