ಬೆಳಗಾವಿ: ಕರ್ನಾಟಕ ಬಂದ್ಗೆ ಬೆಳಗಾವಿ ಜಿಲ್ಲೆಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿಕ್ಕೋಡಿ, ರಾಯಭಾಗ, ಅಥಣಿ ತಾಲೂಕಿನಲ್ಲಿ ಯಾವುದೇ ಬಂದ್ನ ಬಿಸಿ ಮಾತ್ರ ಮುಟ್ಟಲಿಲ್ಲ. ಎಂದಿನಂತೆ ಅಂಗಡಿ- ಮುಂಗಟ್ಟುಗಳು ತೆರೆದಿದ್ದವು. ವ್ಯಾಪಾರ- ವಹಿವಾಟು ಎಂದಿನಂತೆ ನಡೆದಿದ್ದು, ಸಾರಿಗೆ ವ್ಯವಸ್ಥೆ ಕೂಡ ಎಂದಿನಂತೆ ನಡೆದಿದೆ.
ರೈತ ಸಂಘಟನೆ ಹಾಗೂ ಕನ್ನಡಪರ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆದಿದ್ದಾರೆ. ಚಿಕ್ಕೋಡಿಯಲ್ಲಿ ಬಿಕೆ ಕಾಲೇಜಿನ ಮುಂದೆ ಜಮಾವಣೆಗೊಂಡ ರೈತರು ಮೆರವಣಿಗೆ ನಡೆಸಿ, ಬಳಿಕ ನಗರದ ಬಸವ ವೃತ್ತದಲ್ಲಿ ಪ್ರತಿಭಟನೆ ಅಂತ್ಯಗೊಳಿಸಿ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು. ಪೊಲೀಸರು ಎಷ್ಟೇ ಎಚ್ಚರಿಕೆ ನೀಡಿದರೂ ಚಿಕ್ಕೋಡಿಯಲ್ಲಿ ಮಾತ್ರ ಪ್ರತಿಭಟನಾಕಾರರು ಮಾಸ್ಕ ಧರಿಸದೆ ಪ್ರತಿಭಟನೆಗೆ ಆಗಮಿಸಿದ್ದರು. ಅಂತಹ ರೈತರಿಗೆ ಚಿಕ್ಕೋಡಿ ಪಿ.ಎಸ್.ಐ. ರಾಕೇಶ್ ಬಗಲಿ ತಮ್ಮ ಸ್ವಂತ ಖರ್ಚಿನಿಂದಲೆ ನೀರು, ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ನೀಡಿ ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರತಿಭಟನೆ ನಡೆಸುವಂತೆ ಮನವಿಯನ್ನು ಮಾಡಿದರು. ಪಿ.ಎಸ್.ಐ ತೋರಿದ ಮಾನವೀಯತೆಗೆ ಪ್ರತಿಭಟನಾಕಾರರು ಮೆಚ್ಚುಗೆ ವ್ಯಕ್ತಪಡಿಸಿದರು.
Kshetra Samachara
28/09/2020 02:57 pm