ಗದಗ: ವಾಸವಿದ್ದ ಮನೆಯೂ ಬಿದ್ದಿದೆ, ಪ್ರತಿ ತಿಂಗಳು ಬರುತ್ತಿದ್ದ ವೃದ್ಧಾಪ್ಯ ವೇತನವು ಕೈಗೆ ಸಿಗದೆ ಅನಾಥ ವೃದ್ಧೆಯೊಬ್ಬರು ಕಣ್ಣೀರುಡುತ್ತ ಸೂರು, ತುತ್ತು ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಜ್ಜಿಯ ಪರಿಸ್ಥಿತಿ ನೋಡಿದರೆ ಕಲ್ಲು ಹೃದಯದವರಿಗೂ ಕಣ್ಣಾಲಿಗಳು ತೇವಗೊಳ್ಳುತ್ತವೆ.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ 76 ವರ್ಷದ ಈರಮ್ಮ ದಿವಟರ್ ಮಳೆಯಿಂದಾಗಿ ಮನೆ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಅಜ್ಜಿ ಗಜೇಂದ್ರಗಡದ ಟಕ್ಕೆದ ಮಸೀದಿ ಬಳಿಯ ಪುಟ್ಟ ಮನೆಯಲ್ಲಿ ವಾಸವಾಗಿದ್ದರು. ಬಂಧುಗಳ ಮೇಲೆ ಅವಲಂಬನೆಯಾಗದ ಈರಮ್ಮ ಅಜ್ಜಿಗೆ ಸರ್ಕಾರ ನೀಡುವ ಮಸಾಶನ ಆಸರೆಯಾಗಿತ್ತು. ಈಗ ಅದು ಸಹ ಕಳೆದ ಮೂರು ತಿಂಗಳಿನಿಂದ ಬರುತ್ತಿಲ್ಲ.
ಕಳೆದ ಮೂರು ತಿಂಗಳಿನಿಂದ ಕೂಡಿಟ್ಟ ಹಣದಲ್ಲಿ ಹೇಗೋ ಜೀವನ ಮಾಡಿಕೊಂಡಿದ್ದ ಅಜ್ಜಿಯ ಮೇಲೆ ಮಳೆರಾಯ ಕೋಪಗೊಂಡ ಪರಿಣಾಮ ಇದ್ದೊಂದ ಮನೆಯ ಕುಸಿತವಾಗಿದೆ. ಅಜ್ಜಿಗೆ ಮಕ್ಕಳು, ಮೊಮ್ಮಕ್ಕಳು ಯಾರೂ ಇಲ್ಲ. ನಿನ್ನೆ ಬೆಳಗ್ಗೆ ಮನೆ ಬಿದ್ದಿದ್ದರೂ, ಇದುವರೆಗೂ ಯಾವ ಅಧಿಕಾರಿಗಳು ನನ್ನ ಕಷ್ಟ ಕೇಳಲು ಬಂದಿಲ್ಲ. ಸರ್ಕಾರದ ಸಂಬಳ ಸಹ ಬಂದಿಲ್ಲ. ಏನ್ ಮಾಡೋದು ಇಲ್ಲೇ ಇರಬೇಕು ಎಂದು ಈರಮ್ಮ ಅಜ್ಜಿ ಕಣ್ಣೀರಿಡುತ್ತಿದ್ದಾರೆ.
Kshetra Samachara
27/09/2020 06:33 pm