ಕಲಘಟಗಿ: ಕಬ್ಬಿನ ದರ ನಿಗದಿ ಪಡಿಸುವ ಕುರಿತು ಕಳೆದ ಒಂದು ವಾರದಿಂದ ಕಲಘಟಗಿ ತಾಲೂಕಿನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರು ಕಾರ್ಖಾನೆಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ ರೈತರು ಸೋಮವಾರ ಕಲಘಟಗಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.
ಕಬ್ಬಿನ ದರ ನಿಗದಿ ಯಾಗುವ ವರೆಗೂ ಕಲಘಟಗಿ ತಾಲೂಕಿನ ರೈತರು ಕಬ್ಬುಗಳನ್ನು ಕಟಾವು ಮಾಡಬಾರದು ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ತಾಲೂಕಿನ ಸಂಘ ಸಂಸ್ಥೆಗಳು ಕನ್ನಡ ಪರ ಸಂಘಟನೆಗಳು ಹಾಗೂ ವಕೀಲರು ನಮ್ಮ ಈ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಇಂದು ಪತ್ರಿಕಾ ಗೋಷ್ಠಿಯಲ್ಲಿ ಬಸವರಾಜ ಹೊನ್ನಳ್ಳಿ ಹಾಗೂ ಕಬ್ಬೂ ಬೆಳೆಗಾರರ ಅಧ್ಯಕ್ಷ ವಸಂತ ಡಾಕಪ್ಪನವರ ತಿಳಿಸಿದರು.
Kshetra Samachara
08/10/2022 07:13 pm