ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ರೇಲ್ವೆ ಉದ್ಯೋಗಿಯ ಚಿತ್ರಕಲೆಯಿಂದ ಕಂಗೂಳಿಸಿದ ಹುಬ್ಬಳ್ಳಿ ರೈಲ್ವೆ ವರ್ಕ್ ಶಾಪ್

ಪಬ್ಲಿಕ್ ‌ನೆಕ್ಸ್ಟ್ ವರದಿ:ಮಲ್ಲಿಕಾರ್ಜುನ ‌ಪುರದನಗೌಡರ

ಕಲಘಟಗಿ:ಪಟ್ಟಣದ‌ ನಿವಾಸಿ ಚಿತ್ರ ಕಲಾವಿದರಾಗಿರುವ ಕಲ್ಮೇಶ್ವರ ಸೊಬರದ ಹುಬ್ಬಳ್ಳಿಯ ರೈಲ್ವೆ ವರ್ಕ್ ಶಾಪ್ ನ್ನು ತಮ್ಮ ಚಿತ್ರಕಲೆಯ ಮೂಲಕ ಕಂಗೊಳಿಸುವಂತೆ ಮಾಡಿ ಹಿರಿಯ ಅಧಿಕಾರಿಗಳಿಂದ ಭೇಷ ಎನ್ನಿಸಿಕೊಂಡಿದ್ದಾರೆ.

ಕಲ್ಮೇಶ್ವರ ಸೊಬರದ ಹುಬ್ಬಳ್ಳಿಯ ರೈಲ್ವೆ ವರ್ಕ್ ಶಾಪ್ ನಲ್ಲಿ ‌ವೃತ್ತಿ‌ ಮಾಡುತ್ತಾ ಅಲ್ಲಿನ ಗೋಡೆಗಳ ಮೇಲೆ ಮಂಜುನಾಥ ಉಗರಗೋಳ ಸಹಕಾರದಿಂದ ಚಿತ್ರಕಲೆಯ ಮೂಲಕ ಶೃಂಗರಿಸಿದ್ದಾರೆ.

ಮೊದಲಿನಿಂದಲೂ ಕಲೆಯ ಮೇಲೆ ಅಪಾರ ಅಭಿಮಾನ,ಶ್ರದ್ಧಾಭಕ್ತಿ ಇರುವುದರಿಂದ ಅದನ್ನು ಉಸಿರಾಗಿಸಿಕೊಂಡು ಬಂದ ಕಲ್ಮೇಶ ವೃತ್ತಿ ಮತ್ತು ಪ್ರವೃತ್ತಿಯನ್ನು ಸಮಷ್ಠಿಗೊಳಿಸಿ ಕಲೆಯನ್ನೇ ದೇವರಂತೆ ಪೂಜಿಸಿ,ಆರಾಧಿಸುತ್ತಾ ಬಂದಿದ್ದಾರೆ.

ಸದ್ಯ ಹುಬ್ಬಳ್ಳಿಯಲ್ಲಿನ ರೈಲ್ವೆ ಇಲಾಖೆಯಲ್ಲಿ ಸಹಾಯಕ ತಂತ್ರಜ್ಞನಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಸಾಮಾಜಿಕ, ಸಾಂಸ್ಕೃತಿಕ, ಪರಿಸರಾತ್ಮಕ ಕಾಳಜಿ ಮೆರೆಯುವ ಸಂದೇಶಗಳನ್ನು ಸಾರುವ ಚಿತ್ರಕಲೆ ಲಗಳನ್ನು ಗೋಡೆಯ ‌ಮೇಲೆ ಬಿಡಿಸಿ ಮನಸೆಳೆಯುವಂತೆ ಮಾಡಿದ್ದಾರೆ.

ನೈರುತ್ಯ ರೈಲ್ವೆ ಮಹಾಪ್ರಭಂದಕರಾದ ಅಜೇಯಕುಮಾರ್‌ ಸಿಂಗ್ ಹಾಗೂ ಹುಬ್ಬಳ್ಳಿ ರೈಲ್ವೆ ಕಾರ್ಯಾಗಾರದ ಮುಖ್ಯಸ್ಥರಾದ ಉಮೇಶ ಕುಮಾರ ಅವರು ಇಲ್ಲಿ ಭೇಟಿ ನೀಡಿ ತಮ್ಮ ಉದ್ಯೋಗಿಯ ಕಾರ್ಯಕ್ಕೆ ಬೇಷ ಎಂದು ಸ್ಥಳದಲ್ಲಿಯೇ ಐದು ಸಾವಿರ ರೂಪಾಯಿ ನಗದು ಬಹುಮಾನ ಘೋಷಣೆ ಮಾಡಿ ಪ್ರೋತ್ಸಾಹಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

04/02/2021 06:27 pm

Cinque Terre

56.6 K

Cinque Terre

16