ಪಬ್ಲಿಕ್ ನೆಕ್ಸ್ಟ್ ವಿಶೇಷ: ಈರಣ್ಣ ವಾಲಿಕಾರ
ಹುಬ್ಬಳ್ಳಿ- ಒಂದು ಚಿತ್ರ ನೂರು ಭಾವನೆಗಳ ಸಮ. ಚಿತ್ರ ಕಲಾವಿದರ ತಂಡವೊಂದು ಚಿತ್ರಕಲೆಯ ಮೂಲಕ ಜಿಲ್ಲೆಯ ಐತಿಹಾಸಿಕ ಸ್ಥಳಗಳನ್ನು ಜಗತ್ತಿಗೆ ಪರಿಚಯಿಸುವ ಕಾರ್ಯದಲ್ಲಿ ' ನಮ್ಮ ನಮ್ಮ ಮಂದಿ ' ಚಿತ್ರ ಕಲಾ ತಂಡ ತೊಡಗಿದ್ದು, ಶ್ಲಾಘನೀಯ. ಉಚಿತವಾಗಿ ಯುವಕ- ಯುವತಿಯರಿಗೆ ತರಬೇತಿ ನೀಡಲಾಗುತ್ತಿದೆ.
ಹೌದು, ವಿವಿಧ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಚಿತ್ರಗಳನ್ನು ಬಿಡಿಸುವ ಮೂಲಕ ಎಲ್ಲರನ್ನು ಗಮನ ಸೆಳೆಯುತ್ತೀದ್ದಾರೆ. ಇಲ್ಲಿನ ಚಿತ್ರಕಲಾವಿದರು , ಚಿತ್ರಕಲಾ ಶಿಕ್ಷಕರು , ಹವ್ಯಾಸಿ ಚಿತ್ರ ಕಲಾವಿದರು ಜಿಲ್ಲೆಯ ಪುರಾತನ , ಐತಿಹಾಸಿಕ , ಪ್ರೇಕ್ಷಣೀಯ ಸ್ಥಳಗಳನ್ನು ವಿಶ್ವಾದ್ಯಂತ ಪಸರಿಸುವ ಕೆಲಸದಲ್ಲಿ 9 ಕಲಾವಿದರ ತಂಡ ಈ ಕಾರ್ಯದಲ್ಲಿ ಮಗ್ನವಾಗಿದ್ದಾರೆ.
ಪ್ರತಿ ರವಿವಾರ ಜಿಲ್ಲೆಯಲ್ಲಿ ಪುರಾತನ ದೇವಾಲಯ , ಸ್ಥಳ , ಕಟ್ಟಡಗಳನ್ನು ಗುರುತಿಸಿ ಕುಂಚದಲ್ಲಿ ಅರಳಿಸುವ ಕಾರ್ಯ ನಡೆಯುತ್ತಿದೆ. ಕಲಾವಿದರಾದ ಮಂಜುನಾಥ ಭಂಡಾರೆ , ಗಣಪತಿ ಘಾಟಗೆ , ಸುರೇಶ ಅರ್ಕಸಾಲಿ ಹಾಗೂ ರಾಘವೇಂದ್ರ ಪತ್ತಾರ ಆರಂಭದಲ್ಲಿ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದರು . ಮೊದಲ ಬಾರಿ ಶ್ರೀ ಸಿದ್ಧಾರೂಢ ಸ್ವಾಮೀಜಿ ಮಠದ ಚಿತ್ರ ಸಾಕಷ್ಟುಮೆಚ್ಚುಗೆ ಗಳಿಸಿದ್ದು , ಇವರ ಕಾರ್ಯ ನೋಡುಗರ ಗಮನ ಸೆಳೆಯುತ್ತಿದೆ . ಪ್ರತಿ ರವಿವಾರ ಬೆಳಗ್ಗೆ 7 ಗಂಟೆಗೆ ಗುರುತಿಸಿದ. ಸ್ಥಳದಲ್ಲಿ ಹಾಜರಿದ್ದು ಕೇವಲ ಎರಡೂವರೆ ತಾಸಿನಲ್ಲಿ ಆ ಸ್ಥಳದಲ್ಲಿ ಚಿತ್ರ ಬರೆಯುವ ಕೆಲಸ ಆಗುತ್ತಿದೆ.
ಹೀಗೆ ಹಲವಾರು ಚಿತ್ರಗಳನ್ನು ಕುಂಚದಲ್ಲಿ ಅರಳಿಸುವ ಮೂಲಕ ಇನ್ನು ಯಶಸ್ಸುನ್ನು ಕಾಣಲ್ಲಿ, ವಿದೇಶದಲ್ಲಿ ನಮ್ಮ ದೇಶದ ಹೆಸರು ರಾರಾಜಿಸಲಿ ಎನ್ನುವುದು ನಮ್ಮ ಆಶಯ......!
Kshetra Samachara
14/11/2020 10:52 am