ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಬ್ಬು ಬೆಳೆದ ರೈತನ ಬಾಳಲ್ಲಿ ಸಿಹಿ ಬದಲಿಗೆ ಕಹಿ; ಬೆಲೆ ಕುಸಿತದಿಂದ ನೆಲಕ್ಕೆ ಬಿದ್ದ ರೈತ ಸಮುದಾಯ

ಹುಬ್ಬಳ್ಳಿ: ಅದು ಅನ್ನದಾತನ ನಿರೀಕ್ಷೆಯ ಬೆಳೆ‌. ಆ ಬೆಳೆಯಿಂದ ಜೀವನ ಸುಧಾರಿಸಿಕೊಳ್ಳಲು ಹೊರಟಿದ್ದ ರೈತನ ಬದುಕು ಈಗ ಕಣ್ಣೀರ ಕಹಾನಿಗೆ ಸಾಕ್ಷಿಯಾಗಿದೆ. ಸಕ್ಕರೆ ಸಚಿವರ ತವರು ಜಿಲ್ಲೆಯಲ್ಲಿಯೇ ರೈತರೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟಕ್ಕೂ ಏನಿದು ಸಂಕಷ್ಟ ಅಂತೀರಾ ಈ ಸ್ಟೋರಿ ನೋಡಿ..

ಹೌದು..ಕಬ್ಬು ಬೆಳೆದ ರೈತನಿಗೆ ಸಕ್ಕರೆ ಕಾರ್ಖಾನೆಯಿಂದ ಭಾರಿ ಅನ್ಯಾಯವಾಗಿದೆ. ಕಬ್ಬಿಗೆ ಕಳೆದ ಬಾರಿಗಿಂತ ಕಡಿಮೆ ಬೆಲೆ ನಿಗದಿ ಮಾಡಿದ್ದು, ಅತಿವೃಷ್ಟಿಯಿಂದ ನಲುಗಿದ್ದ ಅನ್ನದಾತನ ಬದುಕಿಗೆ ಈಗ ಬೆಲೆ ಕುಸಿತ ಬರೆ ಎಳೆದಿದೆ. ಮಳೆ‌ ಹೊಡೆತಕ್ಕೆ ಕಷ್ಟ ಪಟ್ಟು ಬೆಳೆದ ಅದೆಷ್ಟೋ ಕಬ್ಬು ಕೊಳೆತು ಹೋಗಿದೆ. ನಿರಂತರ ಮಳೆಯಿಂದ ಕಬ್ಬು ಸರಿಯಾದ ‌ರೀತಿಯಲ್ಲಿ ಬೆಳೆದಿಲ್ಲ. ಅದರಲ್ಲೂ ಸಾಲ ಶೂಲ ಮಾಡಿ ಅಲ್ಪಸ್ವಲ್ಪ ಕಬ್ಬು ಬೆಳೆದಿದ್ದ. ಆದ್ರೆ ರೈತ‌ ಬೆಳೆದ ಕಬ್ಬಿಗೆ ಬೆಲೆ ಕುಸಿತವಾಗಿದ್ದು, ಕಳೆದ ವರ್ಷಕ್ಕಿಂತ ಕಬ್ಬಿಗೆ ಕಡಿಮೆ ಬೆಲೆ ನಿಗದಿ‌ ಮಾಡಿದ ಸಕ್ಕರೆ ಕಾರ್ಖಾನೆಯಿಂದ ರೈತ ಸಮುದಾಯಕ್ಕೆ ಬಹುದೊಡ್ಡ ಅನ್ಯಾಯವಾಗಿದೆ ಎಂದು ರೈತ ಸಮುದಾಯ ಕಣ್ಣೀರು ಹಾಕಿದೆ.

ಧಾರವಾಡ ಜಿಲ್ಲೆಯಲ್ಲಿ ಕಲಘಟಗಿ ಹಾಗೂ ಅಳ್ನಾವರ ತಾಲೂಕಗಳಲ್ಲಿ ಅತಿ ಹೆಚ್ಚು ಕಬ್ಬು ಬೆಳೆದಿರುವ ರೈತರ ಜೀವನ ಸಂಕಷ್ಟಕ್ಕೆ ಸಿಲುಕಿದೆ. 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆದಿರುವ ಅನ್ನದಾತರು ಈಗ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಕಳೆದ ವರ್ಷ ಪ್ರತಿ ಟನ್‌ಗೆ 2,592 ಬೆಲೆ ನಿಗದಿ ಮಾಡಿದ್ದ ಸಕ್ಕರೆ ಕಾರ್ಖಾನೆ, ಆದ್ರೆ ಈ ವರ್ಷ 2,372 ಬೆಲೆ‌ ನಿಗದಿ ಮಾಡಿದೆ. ಪ್ರತಿ ಟನ್‌ಗೆ 220 ರೂಪಾಯಿ ಬೆಲೆ ಕಡಿಮೆ ಮಾಡಿದ ಸಕ್ಕರೆ ಕಾರ್ಖಾನೆ. ಇದರಿಂದಾಗಿ ದಿಕ್ಕು ತೋಚದಂತಾ ಕಬ್ಬು ಬೆಳೆದ ರೈತ ಏನು ಮಾಡಬೇಕು ಎಂಬುವಂತ ಗೊಂದಲದಲ್ಲಿದ್ದಾನೆ.

ಇನ್ನೂ 2022-23 ಸಾಲಿನಲ್ಲಿಯೇ ರಸಗೊಬ್ಬರಗಳ ಬೆಲೆ ಹೆಚ್ಚಿಗೆ ಮಾಡಿದ ಸರ್ಕಾರ, ಅದೇ ರೈತ ಬೆಳೆದ ಬೆಳೆಗಳಿಗೆ ಮಾತ್ರ ಬೆಲೆ ಇಲ್ಲದಾಗಿದೆ. ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಎಚ್ಚೆತ್ತುಕೊಂಡು ಈ ಸಕ್ಕರೆ ಕಾರ್ಖಾನೆಗೆ ಬಿಸಿ ಮುಟ್ಟಿಸಬೇಕಿದೆ. ಅಲ್ಲದೇ ಈ ಬಗ್ಗೆ ಸರ್ಕಾರ ಸರಿಯಾದ ಬೆಲೆ‌ ಕೊಡಿಸಿ ರೈತ ಹಿತ ಕಾಪಾಡಬೇಕಿದೆ.

Edited By : Nagesh Gaonkar
Kshetra Samachara

Kshetra Samachara

06/10/2022 01:42 pm

Cinque Terre

15.2 K

Cinque Terre

0

ಸಂಬಂಧಿತ ಸುದ್ದಿ