ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಖಾಸಗಿ ಖರೀದಿಗೆ ಹೇಳಿ ಗುಡ್ ಬೈ, ಸರ್ಕಾರದ ಕೇಂದ್ರಕ್ಕೆ ಬನ್ನಿ !

ಕುಂದಗೋಳ: ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿ ಕೇಂದ್ರ ತೆರೆದಿದೆ. ಇದರ ಸದುಪಯೋಗ ಎಲ್ಲ ರೈತರಿಗೂ ಸಿಗಬೇಕು ಆದಷ್ಟೂ ಬೇಗ ನಿಮ್ಮ ಹೆಸರು ಬೆಳೆ ಮಾರಾಟ ಮಾಡಿ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.

ಅವರು ಕುಂದಗೋಳ ಪಟ್ಟಣದ ಎಪಿಎಂಸಿ ಆವರಣದಲ್ಲಿ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಅವರ ನೇತೃತ್ವದಲ್ಲಿ ದೀಪ ಬೆಳಗಿಸಿ ತೂಕದ ಯಂತ್ರಕ್ಕೆ ಪೂಜೆ ಸಲ್ಲಿಸಿ ಹಾಗೂ ಯರಗುಪ್ಪಿ ಗ್ರಾಮದಲ್ಲಿನ ಹೆಸರು ಖರೀದಿ ಕೇಂದ್ರ ಸಹ ಉದ್ಘಾಟಿಸಿ ಮಾತನಾಡಿ ಕ್ವಿಂಟಾಲ್ ಹೆಸರಿಗೆ 7225 ರೂಪಾಯಿ ಬೆಲೆ ಸಿಗುತ್ತಿರುವುದು ಇದೇ ಮೊದಲು ಎಂದರು.

ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಅವರು ಮಾತನಾಡಿ ಕುಂದಗೋಳ ತಾಲೂಕಿನ ರೈತರು, ಈ ಹೆಸರು ಖರೀದಿ ಕೇಂದ್ರದ ಸೇವೆ ಪಡೆದುಕೊಳ್ಳಿ ಖಾಸಗಿ ವರ್ತಕರ ಬದಲಾಗಿ ಸರ್ಕಾರಕ್ಕೆ ನಿಮ್ಮ ಹೆಸರು ಬೆಳೆ ಮಾರಾಟ ಮಾಡಿರಿ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅರವಿಂದಪ್ಪ ಕಟಗಿ, ಅಡಿವೆಪ್ಪ ಶಿವಳ್ಳಿ, ನಗರ ಘಟಕದ ಅಧ್ಯಕ್ಷ ಸುರೇಶ್ ಗಂಗಾಯಿ, ಅಡಿವೆಪ್ಪ ಬಂಡಿವಾಡ ಹಾಗೂ ತಾಲೂಕಿನ ರೈತರು ಇತರರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

03/10/2022 12:15 pm

Cinque Terre

10.73 K

Cinque Terre

0

ಸಂಬಂಧಿತ ಸುದ್ದಿ