ನವಲಗುಂದ : ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ನೇತೃತ್ವದಲ್ಲಿ ನವಲಗುಂದ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕೇಂದ್ರವು ರೈತರಿಗೆ ನಿಗದಿಪಡಿಸಲಾದ ಬೆಂಬಲ ಬೆಲೆ ಖರೀದಿ ಕೇಂದ್ರದ ಉದ್ಘಾಟನೆಯನ್ನು ಮಾಡಲಾಯಿತು.ನವಲಗುಂದ ಪಟ್ಟಣದ ಎಪಿಎಂಸಿ ಹಾಗು ವಾರಿ ಫ್ಲೋರ್ ಮಿಲ್, ನರಗುಂದ ರಸ್ತೆಯಲ್ಲಿನ ಹೆಸರು ಕಾಳು ಖರೀದಿ ಕೇಂದ್ರ ಸೇರಿದಂತೆ ತಾಲ್ಲೂಕಿನ ಮೊರಬ, ಶಿರಕೋಳ, ಹಾಲಕುಸುಗಲ್ ಗ್ರಾಮದಲ್ಲಿ ಕೇಂದ್ರದ ಉದ್ಘಾಟನೆ ಮಾಡಲಾಯಿತು.
ಈ ಎಫ್ಐಕ್ಯೂ ಗುಣಮಟ್ಟದ ಹೆಸರು ಕಾಳು ಖರೀದಿ ಕೇಂದ್ರ ತೆರೆಯಲಾಗಿದ್ದು, ಪ್ರತಿ ಕ್ವಿಂಟಾಲ್‌ಗೆ 7,775 ರೂಗಳಂತೆ ಗರಿಷ್ಠ 15 ಕ್ವಿಂಟಾಲ್ ಖರೀದಿಸಲಾಗುತ್ತಿದ್ದು, ರೈತರು ಈ ಕೇಂದ್ರಗಳನ್ನು ಸದುಪಯೋಗ ಪಡಿಸಿಕೊಳ್ಳುಬೇಕಿದೆ.
ಇದೆ ಸಂದರ್ಭದಲ್ಲಿ ಬಸಾಪುರ ಗ್ರಾಮದ ರತ್ನಾ ಶಶಿಶೇಖರ್ ಹಿರೇಮಠ ಅವರು ಹಾಗೂ ಕುಮಾರಕೊಪ್ಪ ಗ್ರಾಮದ ಈಶ್ವರಪ್ಪ ವೀರಪ್ಪ ಕುಲಕರ್ಣಿ ಅವರು ರುದ್ರಭೂಮಿಗಾಗಿ ತಮ್ಮ ಜಾಗವನ್ನು ಒದಗಿಸಿ ಕೊಟ್ಟ ಹಿನ್ನೆಲೆ ಅವರಿಗೆ ಈ velen ಪರಿಹಾರದ ಚೆಕ್ ವಿತರಿಸಲಾಯಿತು.
Kshetra Samachara
28/09/2022 09:33 am