ಧಾರವಾಡದ ಕೃಷಿ ಇಲಾಖೆಯ ಅಧಿಕಾರಿಗಳ ಮಹಾ ಎಡವಟ್ಟು ಬಯಲು ಮಾಡಿದ್ದ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯ ಬಿಗ್ ಇಂಪ್ಯಾಕ್ಟ್ ಆಗಿದೆ. ಪರಿಹಾರ ಡಾಟಾ ಎಂಟ್ರಿ ರಿಪೋರ್ಟ್‌ನಲ್ಲಿ ಎರಡೂ ತಾಲೂಕುಗಳನ್ನೇ ಕೃಷಿ ಅಧಿಕಾರಿಗಳು ಕೈಬಿಟ್ಟಿದ್ದರು. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಕೃಷಿ ಇಲಾಖೆಯು ಎರಡು ತಾಲೂಕಿನ ಹೆಸರನ್ನು ಸೇರ್ಪಡೆ ಮಾಡಿದೆ.
ಹೌದು.. ಅಧಿಕಾರಿಗಳ ನಡೆಯಿಂದ ಅನ್ನದಾತ ಹಿಡಿಶಾಪ ಹಾಕುವಂತಾಗಿತ್ತು. ಅಲ್ಲದೇ ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಪರಿಹಾರ ಡಾಟಾ ಎಂಟ್ರಿ ಪ್ರೋಗ್ರೇಸ್ ರಿಪೋರ್ಟ್ ಲಭ್ಯವಾಗಿತ್ತು. ಈ ರಿಪೋರ್ಟ್‌ನಲ್ಲಿ ಕಲಘಟಗಿ ಹಾಗೂ ಅಳ್ನಾವರ ತಾಲೂಕನ್ನು ಕೈಬಿಟ್ಟ ಅಧಿಕಾರಿಗಳ ಬೇಜವಾಬ್ದಾರಿತನವನ್ನು ಪಬ್ಲಿಕ್ ನೆಕ್ಸ್ಟ್ ಬಯಲು ಮಾಡಿತ್ತು. ವರದಿ ಬಿತ್ತರಿಸಿದ ಬೆನ್ನಲ್ಲೇ ಕೃಷಿ ಇಲಾಖೆ ಎಚ್ಚೆತ್ತುಕೊಂಡಿದೆ.
ಧಾರವಾಡ ಜಿಲ್ಲೆಯಲ್ಲಿ ಒಟ್ಟು ಏಳು ತಾಲೂಕುಗಳಿವೆ. ಧಾರವಾಡ, ಹುಬ್ಬಳ್ಳಿ, ಕುಂದಗೋಳ, ನವಲಗುಂದ ಅಣ್ಣಿಗೇರಿ ಕಲಘಟಗಿ ಹಾಗೂ ಅಳ್ನಾವರ ಈ ತಾಲೂಕುಗಳು ಧಾರವಾಡ ಜಿಲ್ಲೆಯಲ್ಲಿವೆ. ಆದ್ರೆ ಪಬ್ಲಿಕ್ ನೆಕ್ಸ್ಟ್ ಗೆ ಸಿಕ್ಕ ದಾಖಲೆಯಲ್ಲಿ ಕಲಘಟಗಿ, ಅಳ್ನಾವರ ಎರಡೂ ತಾಲೂಕುಗಳು ನಾಪತ್ತೆಯಾಗಿದ್ದವು ಈ ಕುರಿತು ವರದಿ ಮಾಡಿದ್ದು,
ಮಾತ್ರವಲ್ಲದೆ ಇಲಾಖೆಯ ಸಚಿವರ ಗಮನಕ್ಕೆ ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಎರಡು ತಾಲೂಕಿನ ಅನ್ನದಾತರಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಮಾಡಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/09/2022 08:04 pm