ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಮೇಳದಲ್ಲಿ ಯಂತ್ರೋಪಕರಣಗಳತ್ತ ಹೆಚ್ಚಿದ ರೈತರ ಒಲವು

ಧಾರವಾಡ : ಕೃಷಿ ಮೇಳದ ಕೊನೆಯ ದಿನವಾದ ಇಂದು ಧಾರವಾಡದ ಕೃಷಿ ವಿಶ್ವ ವಿದ್ಯಾಲಯದಲ್ಲಿ ರೈತರಿಗೆ ಸಹಕಾರಿ ಆಗುವ ಹಲವಾರು ವಿಷಯಗಳನ್ನ ನೀಡುವುದರ ಜೊತೆಗೆ ವೈಜ್ಞಾನಿಕ ಕೃಷಿ ಅಳವಡಿಕೆ ಬಗ್ಗೆ ರೈತರು ಹೆಚ್ಚಾಗಿ ತೊಡಗಿಸಿಕೊಂಡಿದ್ದರು.

ಎಸ್.. ಕಳೆದ ನಾಲ್ಕು ದಿನಗಳಿಂದ ಕೃಷಿ ಮೇಳದಲ್ಲಿ ರೈತರು ಅಷ್ಟೇ ಅಲ್ಲದೆ ಸಾರ್ವಜನಿಕರು, ವಿದ್ಯಾರ್ಥಿಗಳು ಆಗಮಿಸಿ, ಕೃಷಿಯ ಬಗ್ಗೆ ಮಾಹಿತಿಯನ್ನು ಪಡೆದರು. ಕೊನೆಯ ದಿನವಾದ ಇಂದು ರೈತರು ಹೆಚ್ಚಾಗಿ ವೈಜ್ಞಾನಿಕ ಯಂತ್ರೋಪಕರಣಗಳಲ್ಲಿ ತೊಡಗಿದ್ದರು. ವಿವಿಧ ರೀತಿಯ ಯಂತ್ರೋಪಕರಣಗಳು ಈ ಬಾರಿಯ ಪ್ರದರ್ಶನಕ್ಕೆ ಆಗಮಿಸಿದ್ದು, ಯಂತ್ರೋಪಕರಣಗಳನ್ನ ರೈತರು ಖರೀದಿಸಲು ಮುಗಿಬಿದ್ದಿದ್ದರು.

ರೈತರು ಇತ್ತೀಚೆಗೆ ಕೃಷಿಯನ್ನ ಮತ್ತಷ್ಟು ವೈಜ್ಞಾನಿಕ ಬೇಸಾಯಕ್ಕೆ ಮುಂದಾಗಿದ್ದು, ತಂತ್ರಜ್ಞಾನದ ಮೂಲಕ ಹೆಚ್ಚು ಇಳುವರಿ ಹಾಗೂ ಕಡಿಮೆ ಸಮಯದಲ್ಲಿ ಕೃಷಿ ಕಾರ್ಯ ಮುಗಿಸಬೇಕು ಅನ್ನೋ ಕಾರಣಕ್ಕೆ ವಿವಿಧ ಯಂತ್ರಗಳ ಮೊರೆಹೋಗಿದ್ದಾರೆ. ಕುಂಟಿ, ಕೂರಗಿ, ಸ್ಪಿನ್ಕ್ಲರ್, ರೂಟರ್, ಬಿತ್ತುವ ಮಷಿನ್, ಕಾಳನ್ನ ಬೇರ್ಪಡಿಸುವ ಮಷಿನ್, ಜಮೀನಲ್ಲಿ ಬೆಳೆಗಳ ಸಾಲು ಬಿಡುವ ಮಷಿನ್‌ಗಳು ರೈತರ ಗಮನಸೆಳೆದವು.

ಒಟ್ಟಾರೆ ಈ ಬಾರಿಯ ಕೃಷಿ ಮೇಳಕ್ಕೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ನಾಲ್ಕು ದಿನಗಳಿಂದ ರೈತರು ಆಗಮಿಸಿದ್ದರು. ಕೃಷಿ ಚಟುವಟಿಕೆಗೆ ಸಹಾಯಕ ಮಾಹಿತಿಯನ್ನು ಪಡೆದು, ತಮ್ಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ತಮ್ಮ ಆದಾಯವನ್ನು ದ್ವಿಗುಣಗೊಳಿಸುವ ಯೋಜನೆಗೆ ಮುಂದಾಗಿದ್ದಾರೆ.

ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Nagesh Gaonkar
Kshetra Samachara

Kshetra Samachara

20/09/2022 07:17 pm

Cinque Terre

68.88 K

Cinque Terre

0

ಸಂಬಂಧಿತ ಸುದ್ದಿ