ನವಲಗುಂದ: ದ್ವಿತೀಯ ಪಿಯುಸಿ ಕಲಿತು ನೌಕರಿಯ ಬಗ್ಗೆ ತಲೆ ಕೆಡಿಸಿಕೊಳ್ಳದ ಅನ್ನದಾತನೊಬ್ಬ ತನ್ನ ಕಾರ್ಯದಲ್ಲಿ ಸಾಧನೆ ಮಾಡಿದ್ದಾನೆ. ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ಕೃಷಿ ಹೊಂಡ ತೆಗೆಸಿದ ರೈತ ಈಗ ಮಾದರಿ ಕೃಷಿಕನಾಗುವ ಜೊತೆಗೆ ನೌಕರರಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಆದಾಯ ಗಳಿಸುತ್ತಿದ್ದಾನೆ.
ನವಲಗುಂದ ತಾಲೂಕಿನ ಭದ್ರಾಪೂರ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಸಾಪೂರ ಗ್ರಾಮದ ರೈತ ಯಲ್ಲಪ್ಪ ಹನುಮಂತಪ್ಪ ತಹಶೀಲ್ದಾರರ ತನ್ನ ಹೊಲದಲ್ಲಿ ಚಿನ್ನದ ಬೆಳೆ ಬೆಳೆದು ರಾಶಿ ರತ್ನದಂತ ಹೆಸರನ್ನು ಒಕ್ಕಲು ಮಾಡಿ ಹೆಸರುವಾಸಿಯಾಗಿದ್ದಾನೆ. ತಮ್ಮ ಐದು ಎಕರೆ ಜಮೀನಿನಲ್ಲಿ 100×100 ಅಳತೆಯ ಕೃಷಿಹೊಂಡ ನಿರ್ಮಾಣ ಮಾಡಿಸಿಕೊಂಡು ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಬಿಟಿ ಹತ್ತಿ, ಗೋವಿನ ಜೋಳ, ಮೆಣಸಿನಕಾಯಿಗೆ ಮಾತ್ರವೇ ಸೀಮಿತವಾಗಿದ್ದ ಕೃಷಿಯಲ್ಲಿ ದೇಶಪಾಂಡೆ ಫೌಂಡೇಶನ್ ಸಹಾಯದಿಂದ ಆಧುನಿಕತೆಯನ್ನು ಮೈಗೂಡಿಸಿಕೊಂಡ ರೈತ ಹೆಸರು, ಬಿಟ್ಟಿ ಹತ್ತಿ, ಗೋವಿನಜೋಳ, ಈರುಳ್ಳಿ, ಸೂರ್ಯಕಾಂತಿ, ತೆಂಗಿನಕಾಯಿ ಬೆಳೆಯುವ ಮೂಲಕ 70,000 ಇದ್ದ ವಾರ್ಷಿಕ ಆದಾಯವನ್ನು ಎರಡು ಲಕ್ಷಕ್ಕೆ ಏರಿಕೆ ಮಾಡಿ ಕೊಂಡಿದ್ದಾನೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/08/2022 08:00 pm