ಧಾರವಾಡ: ವಿಪರೀತ ಮಳೆಯಿಂದಾಗಿ ಮುಂಗಾರು ಹಂಗಾಮಿನ ಹೆಸರು ಬೆಳೆ ನಾಶವಾಗಿದೆ. ಕೈಗೆ ಬಂದಷ್ಟು ಹೆಸರನ್ನು ಕಟಾವು ಮಾಡಲಾಗುತ್ತಿದ್ದು, ಪ್ರತಿ ಕ್ವಿಂಟಾಲ್ ಹೆಸರಿಗೆ ಸರ್ಕಾರ 10 ಸಾವಿರ ಬೆಂಬಲ ಬೆಲೆ ನೀಡಬೇಕು ಎಂದು ನವಲಗುಂದ ತಾಲೂಕಿನ ರೈತ ಮುಖಂಡ ಮಲ್ಲಿಕಾರ್ಜುನಗೌಡ ಬಾಳನಗೌಡರ ಆಗ್ರಹಿಸಿದ್ದಾರೆ.
ಹೆಸರು ಖರೀದಿ ಕೇಂದ್ರವನ್ನು ಸರ್ಕಾರ ಕೂಡಲೇ ರೈತರ ಬದುಕಿಗೆ ಆಸರೆಯಾಗಬೇಕು. ಹೊಲಗಳಿಗೆ ಹೋಗುವ ಎಲ್ಲ ರಸ್ತೆಗಳು ಮಳೆಯಿಂದ ಸಂಪೂರ್ಣ ಹದಗೆಟ್ಟಿದ್ದು, ಅವುಗಳತ್ತ ಜನಪ್ರತಿನಿಧಿಗಳು ಕಿಂಚಿತ್ತೂ ಗಮನಹರಿಸಿಲ್ಲ. ಕೂಡಲೇ ರಸ್ತೆಗಳ ಸುಧಾರಣೆ ಮಾಡಬೇಕು. ಇನ್ನು ಸರ್ಕಾರ ಎಲ್ಲ ಬ್ಯಾಂಕ್‌ಗಳಿಂದ ಶೇ.1 ರ ಬಡ್ಡಿ ದರದಲ್ಲಿ ರೈತರಿಗೆ 10 ಲಕ್ಷದವರೆಗೆ ಸಾಲ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.
Kshetra Samachara
16/08/2022 02:47 pm