ಅಣ್ಣಿಗೇರಿ: ಅಣ್ಣಿಗೇರಿ ಮತ್ತು ನವಲಗುಂದ ತಾಲೂಕಿನಲ್ಲಿ ಹವಾಮಾನ ಇಲಾಖೆಯ ಪ್ರಕಾರ ಮುಂದಿನ ಐದು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಅಧಿಕಾರಿ ಶ್ರೀನಾಥ್ ಚಿಮ್ಮಲಗಿ ತಿಳಿಸಿದ್ದಾರೆ.
ಅಣ್ಣಿಗೇರಿ ತಾಲೂಕಿನಲ್ಲಿ 181 ಮಿಮೀ ಮಳೆಯಾಗಬೇಕು ಆದರೆ 261 ಮಿಮೀ ಆಗಿದೆ.
ನವಲಗುಂದ ತಾಲೂಕಿನಲ್ಲಿ ಇಲ್ಲಿಯವರೆಗೂ 172 ಮಿಮೀ ವಾಡಿಕೆ ಮಳೆಯಾಗಬೇಕು.ಆದರೆ 250 ಮಿಮೀ ಮಳೆ ಸುರಿದಿದೆ. ಒಟ್ಟಾರೆ ನವಲಗುಂದ ತಾಲೂಕಿನಲ್ಲಿ ಶೇಕಡಾ 45% ರಷ್ಟು ಹಾಗೂ ಅಣ್ಣಿಗೇರಿಯಲ್ಲಿ ಶೇಕಡಾ 39 % ರಷ್ಟು ಹೆಚ್ಚು ಮಳೆಯಾಗಿದೆ ಎಂದರು.
ಇನ್ನೂ ಬರುವ ದಿನಗಳಲ್ಲಿ ಮಳೆಯಾದರೂ ಸಹ ರೈತರ ಬೆಳೆದ ಬೆಳೆಗಳು ಹಾನಿಯಾದರೆ, ಮಳೆಯಾಗಿ 72 ಗಂಟೆಯಲ್ಲಿ ಕೃಷಿ ಇಲಾಖೆಗೆ ಬಂದು ಅರ್ಜಿ ಸಲ್ಲಿಸಬಹುದು. ಹಾಗೂ ಐದು ದಿನ ಮಳೆ ಹೆಚ್ಚು ಇರುವದರಿಂದ ರೈತರು ಕೂಡಾ ಜಾಗೃತರಾಗಿರ ಬೇಕೆಂದು ತಿಳಿಸಿದರು.
Kshetra Samachara
08/08/2022 09:02 am