ಕುಂದಗೋಳ:ಮುಂಗಾರು ಹಂಗಾಮಿನಲ್ಲಿ ಕಾಡಿದ ರಸಗೊಬ್ಬರದ ಸಮಸ್ಯೆ ಕುಂದಗೋಳ ತಾಲೂಕಿನಲ್ಲಿ ಸದ್ಯ ನೀಗಿದ್ದು, ಕುಂದಗೋಳ ಪಟ್ಟಣದ ಸ್ಥಳೀಯ ಕೃಷಿ ಸಂಘಗಳಲ್ಲಿ 102 ಟನ್ ಗೊಬ್ಬರ ಶೇಖರಣೆ ಇದೆ.
ಕುಂದಗೋಳಕ್ಕೆ ಇತ್ತೀಚೆಗೆ ರಸಗೊಬ್ಬರ ಆಮದಾಗಿದ್ದು ಯೂರಿಯಾ, ಡಿಎಪಿ ಸೇರಿ ಒಟ್ಟು 102 ಟನ್ ಗೊಬ್ಬರ ಸಂಗ್ರಹಣೆ ಇದ್ದು, ಈಗಾಗಲೇ ಹತ್ತಿ, ಶೇಂಗಾ ಹಾಗೂ ತೋಟಗಾರಿಕೆ ಬೆಳೆ ಮೆಣಸಿನಕಾಯಿ ಬೆಳೆಯುವವರು ಸ್ಥಳೀಯ ಸೊಸೈಟಿಯಿಂದ ಗೊಬ್ಬರ ಪಡೆಯುತ್ತಿದ್ದಾರೆ.
ಟ್ರ್ಯಾಕ್ಟರ್, ಟಾಟಾ ಏಸ್, ಬೈಕ್ ಕುಂದಗೋಳ ತಾಲೂಕಿನ ಹಳ್ಳಿಗರು ಬಂದು ತಮ್ಮ ತಮ್ಮ ಅಗತ್ಯಕ್ಕೆ ಅನುಗುಣವಾಗಿ ರಸಗೊಬ್ಬರ ಪಡೆಯುತ್ತಿದ್ದು ಈಗಾಗಲೇ ರಸಗೊಬ್ಬರ ಅವಶ್ಯವಿರುವ ರೈತರು ಸಹ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಕುಂದಗೋಳ ತಾಲೂಕಿನ ಸೊಸೈಟಿಗಳು ಸರ್ಕಾರಿ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಗೊಬ್ಬರ ಪೂರೈಕೆ ಮಾಡುತ್ತಿವೆ.
Kshetra Samachara
02/08/2022 10:22 pm