ಅಣ್ಣಿಗೇರಿ: ಧಾರವಾಡ ಜಿಲ್ಲೆ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿ ಈ ಸಲ ಮುಂಗಾರು ಮಳೆ ಉತ್ತಮವಾಗಿ ಆಗಿದ್ದು, ಇದರಿಂದ ರೈತರು ಅತಿ ಉತ್ಸಾಹದಿಂದ ಇದ್ದರು. ಶೇಕಡ 90 ರಷ್ಟು ಭಾಗ ಹೆಸರಿನ ಬೆಳೆ ಬೆಳೆದು ಉತ್ತಮವಾದ ಫಸಲು ಕೈಗೆ ಸಿಗುತ್ತದೆ ಎಂಬ ನಂಬಿಕೆಯಿಟ್ಟಿದ್ದರು. ಆದರೆ ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆ ಮತ್ತು ಗಾಳಿಯಿಂದಾಗಿ ಹೆಸರಿನ ಬೆಳೆ ನೆಲಕಚ್ಚಿ ಸಂಪೂರ್ಣ ಹಾಳಾಗಿದೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಅವರು ತಿಳಿಸಿದರು.
ಪಟ್ಟಣದ ಐಬಿ ಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ತಾಲೂಕಿನ ಗ್ರಾಮಗಳಲ್ಲಿ ಸಂಚಾರ ಮಾಡಿ ನೋಡಿದಾಗ ದಿಗ್ಬ್ರಮೆ ಕೊಂಡಿದ್ದೇನೆ. ರೈತರ ಸಾಕಷ್ಟು ಖರ್ಚು ಮಾಡಿ ಬೆಳೆಸಿದ ಹೆಸರಿನ ಬೆಲೆ ಸೇರಿದಂತೆ ಎಲ್ಲ ಬೆಳೆಗಳು ಸಾಕಷ್ಟು ಹಾಳಾಗಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಮತ್ತು ಈ ಭಾಗದ ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಮನವಿ ಮಾಡುತ್ತಿದ್ದು, ಖುದ್ದಾಗಿ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಬೆಳೆ ವಿಮೆ ಬಿಡುಗಡೆ ಮಾಡುವುದರ ಜೊತೆಗೆ ಪ್ರತಿ ಎಕರೆಗೆ 30 ರಿಂದ 50 ಸಾವಿರ ರೂಪಾಯಿ ಬೆಳೆ ಪರಿಹಾರ ಶೀಘ್ರದಲ್ಲೇ ರೈತರಿಗೆ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಒಂದು ವೇಳೆ ಸರ್ಕಾರ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದರೆ ಧಾರವಾಡ ಜಿಲ್ಲೆಯ ಎಲ್ಲ ರೈತರನ್ನು ಒಟ್ಟುಗೂಡಿಸಿ ಧಾರವಾಡದಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಮಾತನಾಡಿದರು.
ಈ ವೇಳೆ ರಾಜೇಶ್ವರ ರಾವ್, ಮಂಜುನಾಥ್,ಆನಂದ್ ಕೆಸರ್ಪ್ಪನವರ್,ರಾಘವೇಂದ್ರ ವೆರ್ಣೇಕರ್,ರವೀಂದ್ರ, ಮಂಜುನಾಥ್,ಸಂತೋಷ್, ಅಮೃತೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Kshetra Samachara
02/08/2022 07:13 pm