ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಅತಿವೃಷ್ಟಿ ಮರೆಸಿದ ನರೇಗಾ ಯೋಜನೆ-ಪಂಚಮಿ ಹಬ್ಬಕ್ಕೆ ಝಣ ಝಣ ಕಾಂಚಾಣ!

ಕುಂದಗೋಳ:ಬೆಂಬಿಡದೆ ಕಾಡಿದ ಅತಿವೃಷ್ಟಿಯಿಂದ ಹಳದಿ ವರ್ಣಕ್ಕೆ ತಿರುಗಿದ ಬೆಳೆ. ಭೂಮಿಯಲ್ಲಿ ಕಾಲಿಡದಂತ ತೇವಾಂಶವಿದೆ. ಇದರ ನಡುವೆ ಕೃಷಿ ಕಾಯಕವಿಲ್ಲದೆ ರೈತಾಪಿ ಮಹಿಳೆಯರು ಮನೆಯಲ್ಲಿಯೇ ಇದ್ದಾರೆ. ಆದರೆ, ಆ ಒಂದು ಯೋಜನೆ ಇವರಿಗೆ ಪಂಚಮಿ ಹಬ್ಬಕ್ಕೆ ಕಾಂಚಾಣ ನೀಡಿದೆ.

ಹೌದು ! ಅತಿವೃಷ್ಟಿ ಪರಿಣಾಮ ಭೂಮಿಯಲ್ಲಿ ಸದ್ಯಕ್ಕೆ ರೈತಾಪಿ ಮಹಿಳೆಯರು ಏನೂ ಕೆಲಸವೇ ಇಲ್ಲ. ಆಜಾದಿ ಕಾ ಅಮೃತ ಮಹೋತ್ಸವ ಯೋಜನೆಯ ಕೆರೆ ಅಭಿವೃದ್ಧಿ ನರೇಗಾ ಕಾಮಗಾರಿ, ಈಗ ಗ್ರಾಮೀಣ ಮಹಿಳೆಯರಿಗೆ ದುಡಿಮೆಗೆ ತಕ್ಕ ಕೂಲಿ ನೀಡಿದೆ.

ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದ ಕೆರೆ 39 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಆಗ್ತಾ ಇದೆ. ಮೊದಲ ಹಂತದಲ್ಲಿ ಹುಲ್ಲು ಕಿತ್ತು ಕೆರೆ ಸ್ವಚ್ಛ ಮಾಡೋ ಕೆಲಸಕ್ಕೆ ಗ್ರಾಮೀಣ ರೈತಾಪಿ ಮಹಿಳೆಯರಿಗೆ ಹಾಜರಾಗಿದ್ದಾರೆ.

ಈಗಾಗಲೇ ಎರಡು ನೂರಕ್ಕೂ ಅಧಿಕ ಜನ, ನರೇಗಾ ಕಾಮಗಾರಿ ಪ್ರಯೋಜನ ಪಡೆದುಕೊಂಡಿದ್ದಾರೆ. ಇನ್ನೂ ಹಲವಾರು ಜನರು ಇದರಡಿ ಕೆಲಸಕ್ಕೆ ಮುಂದಾಗಿದ್ದು, ಒಟ್ಟಾರೆ ನರೇಗಾ ಕಾಮಗಾರಿ ಹಳ್ಳಿಗರಿಗೆ ಅತಿವೃಷ್ಟಿ ಕಷ್ಟ ಮರೆಸಿದೆ.

Edited By : Somashekar
Kshetra Samachara

Kshetra Samachara

01/08/2022 06:34 pm

Cinque Terre

10.81 K

Cinque Terre

1

ಸಂಬಂಧಿತ ಸುದ್ದಿ