ನವಲಗುಂದ : ಕಳೆದ ಹತ್ತು ದಿನಗಳಿಂದ ನವಲಗುಂದ ಪಟ್ಟಣದ ವೀರಗಲ್ಲಿನ ಎದುರು ಹಲವು ಬೇಡಿಕೆಗಳ ಈಡೇರಿಕೆಗಾಗಿ ಸರತಿ ಉಪವಾಸಕ್ಕೆ ಕುಳಿತ ರೈತರಿಗೆ ಭಾನುವಾರ ಸೊಟಕನಾಳ ಗ್ರಾಮದ ರೈತರು ಸಾಥ್ ನೀಡುವ ಮೂಲಕ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ತಾಲ್ಲೂಕಿನ ಸೊಟಕನಾಳ ಗ್ರಾಮದ ಸುಮಾರು ಹತ್ತರಿಂದ ಹದಿನೈದು ರೈತರು ಸತತವಾಗಿ ಕಳೆದ ಹತ್ತು ದಿನಗಳಿಂದ ಪ್ರತಿಭಟನೆ ದಾರಿ ಹಿಡಿದ ರೈತರಿಗೆ ಬೆಂಬಲ ನೀಡಿದರು. ಇಷ್ಟು ದಿನಗಳ ಕಾಲ ಉಪವಾಸ ಸತ್ಯಗ್ರಹಕ್ಕೆ ಕುಳಿತ ರೈತರು ಸಚಿವರ ವಿರುದ್ಧ ಅಸಮಾಧಾನಗೊಂಡಿದ್ದಾರೆ.
Kshetra Samachara
31/07/2022 02:21 pm