ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮುಂಗಾರಿಗೆ ಗೊಬ್ಬರ ಪೂರೈಕೆ ವಿತರಕರಿಗೆ 14 ರೂಪಾಯಿ ನಷ್ಟ

ಕುಂದಗೋಳ : ಮುಂಗಾರು ಬಿತ್ತನೆಗಾಗಿ ಈಗಾಗಲೇ ಭೂಮಿಯನ್ನು ಹದಗೊಳಿಸಿದ ರೈತರಿಗೆ ಬೀಜ ಗೊಬ್ಬರ ಸಮಸ್ಯೆ ಕಾಡುತ್ತಿದ್ದು ಅದೆಷ್ಟೋ ರೈತ ಸಂಘಟನೆ ಸಮರ್ಪಕ ಗೊಬ್ಬರ ಪೂರೈಕೆಗೆ ಒತ್ತಾಯ ಮಾಡುತ್ತಿವೆ.

ಈ ನಡುವೆ ಇತ್ತ ಕುಂದಗೋಳ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಗೊಬ್ಬರ ವಿತರಕ ಒಕ್ಕೂಟದವರು ಸಹಾಯಕ ಕೃಷಿ ನಿರ್ದೇಶಕ ಸದಾಶಿವ ಕಾನೂರಿಯವರನ್ನು ಭೇಟಿ ಆಗಿ ಗೊಬ್ಬರ ವಿತರಣೆ ದರ ಪರಿಷ್ಕರಣೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.

ಕುಂದಗೋಳ ತಾಲೂಕಿನಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಗೊಬ್ಬರ ವಿತರಕ ಸಂಘದವರು ಸರ್ಕಾರ ನಿಗದಿಪಡಿಸಿದ ಬೆಲೆಗೆ ಗೊಬ್ಬರ ವಿತರಣೆ ಮಾಡಿದ್ರೇ, ಡಿಎಪಿ 2 ರೂಪಾಯಿ ಹಾಗೂ ಯೂರಿಯಾ 12 ರೂಪಾಯಿ ಹೆಚ್ಚಿನ ವೆಚ್ಚ ವಿತರಕರಿಗೆ ಹೊರೆ ಬೀಳುತ್ತಿದ್ದು ಲಾಭದ ಬದಲು ಹಾನಿ ಹೆಚ್ಚಾಗಿದೆ.

ಸಾಮಾನ್ಯವಾಗಿ ಸಾರಿಗೆ ಖರ್ಚು ಹಮಾಲರ ಖರ್ಚು ತೆಗೆದರೆ ವಿತರಕರಿಗೆ ಲಾಭದ ಮಾತು ದೂರವಾಗಿದೆ. ಪ್ರತಿ ಯೂರಿಯಾ ಡಿಎಪಿ ಎರಡು ಚೀಲ ಸೇರಿ 14 ರೂಪಾಯಿ ವರ್ತಕರಿಗೆ ಹೊರೆಯಾಗುತ್ತಿದೆ. ಈ ಬಗ್ಗೆ ಸರ್ಕಾರ ಗೊಬ್ಬರ ವಿತರಣೆ ಪರವಾನಗಿ ಹೊಂದಿದವರಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಮನವಿ ಸಲ್ಲಿಸಿದರು.

-ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Shivu K
Kshetra Samachara

Kshetra Samachara

31/05/2022 08:50 pm

Cinque Terre

66.47 K

Cinque Terre

1

ಸಂಬಂಧಿತ ಸುದ್ದಿ