ನವಲಗುಂದ : ಅಜ್ಜ ಮುತ್ತಜ್ಜನ ಕಾಲದಿಂದಲೂ ತಮ್ಮ ಜಮೀನಿನಲ್ಲಿ ಪರ್ಯಾಯ ಬೆಳೆ ಕಾಣದೆ ಹಳೆ ಕೃಷಿ ಪದ್ಧತಿ ರೂಢಿಸಿಕೊಂಡ ರೈತರ ಬಾಳಲ್ಲಿ ಕೃಷಿಹೊಂಡ ಆಧುನಿಕತೆ ಹೊಳಪು ಚೆಲ್ಲಿ ಅನ್ನದಾತನ ಕೈ ಹಿಡಿದಿದೆ.
ಹೌದು ! ಈಗಾಗಲೇ ನವಲಗುಂದದ ತಾಲೂಕಿನ ಅದೆಷ್ಟೋ ಹಳ್ಳಿ ಹಳ್ಳಿಯ ರೈತರನ್ನು ಕೃಷಿಹೊಂಡ ಆಶ್ರಿತ ಬೇಸಾಯವು ಶ್ರೀಮಂತರನ್ನಾಗಿ ಮಾಡಿದೆ. ಮಳೆ ಅಭಾವದ ನಡುವೆ ಬೆಳೆ ಪಡೆಯುವ ಧೈರ್ಯ, ತನ್ನಿಷ್ಟದಂತೆ ವಾಣಿಜ್ಯ, ತೋಟಗಾರಿಕೆ ಬೆಳೆ ಪಡೆಯುವ ಛಲ ತುಂಬಿದೆ.
ಈ ಸಾಲಿನಲ್ಲಿ ತಲೆಮೊರಬ ಗ್ರಾಮದ ಯುವ ಉತ್ಸಾಹಿ ರೈತ ಸಿದ್ಧಾರೂಢ ತಡಕೋಡ ಅವರು 16 ಎಕರೆ ಭೂ ವಿಸ್ತಾರಕ್ಕೆ ಒಳಪಟ್ಟಂತೆ ನೂರು ನೂರು ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಯಾವ ರೀತಿಯಲ್ಲಿ ಬೆಳೆ ಬೆಳೆದಿದ್ದಾರೆ ? ಕೃಷಿಹೊಂಡ ಅವರ ರೈತಾಪಿ ಬಾಳಲ್ಲಿ ಹೇಗೆ ಉಪಯುಕ್ತವಾಯ್ತು ? ಎಂಬುದರ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ನಡೆಸಿದ ಚಿಟ್ ಚಾಟ್ ಇಲ್ಲಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/05/2022 03:11 pm