ನವಲಗುಂದ : ಶಿಕ್ಷಣ ಇದ್ದರೆ ಸಾಕು ಎಲ್ಲಾದ್ರೂ ಉದ್ಯೋಗ ಪಡೆಯಬಹುದು ಎಂದು ಊರೂರು ಅಲೆಯುವವರ ನಡುವೆ ಇಲ್ಲೊಬ್ಬ ಪದವೀಧರ ಯುವಕ ಯಾವ ಉದ್ಯೋಗವನ್ನೂ ಅರಸದೆ ಕೃಷಿ ಕಾಯಕ ಅನುಸರಿಸಿದ್ದಾರೆ.
ನವಲಗುಂದ ತಾಲೂಕಿನ ತಲೆಮೊರಬ ಗ್ರಾಮದ ಪದವೀಧರ ರೈತ ರವಿ ತೊರಗಲ್ ಅವರೇ ಇಂತಹ ಕೃಷಿ ಕಾಯಕ ಅರಸಿ ದೇಶಪಾಂಡೆ ಫೌಂಡೇಶನ್ ಸಹಕಾರ ಪಡೆದು ಕೃಷಿಹೊಂಡ ನಿರ್ಮಿಸಿಕೊಂಡು ರೈತಾಪಿ ಕಾಯಕದಲ್ಲೇ ಆನಂದ ಕಂಡುಕೊಂಡಿದ್ದಾರೆ.
ತಮ್ಮ 5 ಎಕರೆ ಜಮೀನಿನ ಬೇಸಾಯಕ್ಕೆ ಮಳೆ ಅಭಾವದ ನಡುವೆ ಕೈ ಹಿಡಿಯಬಲ್ಲ, ತೋಟಗಾರಿಕೆ ಬೆಳೆಗೆ ಸಹಕಾರಿಯಾದ 100/100 ಸುತ್ತಳತೆ ಕೃಷಿಹೊಂಡ ನಿರ್ಮಿಸಿಕೊಂಡಿದ್ದಾರೆ. ಆ ಮೂಲಕ ಅತಿ ಉತ್ತಮ ಇಳುವರಿಯ ಹತ್ತಿ, ಹೆಸರು, ಈರುಳ್ಳಿ, ಕುಸುಬೆ, ಕಡಲೆ ಬೆಳೆ ಬೆಳೆದು ವಾರ್ಷಿಕ 4 ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಿದ್ದಾರೆ.
ಇದಲ್ಲದೇ ಅದೆಷ್ಟೋ ವಿದ್ಯಾವಂತ ಯುವಕರಿಗೆ ಕೃಷಿ ಕಾಯಕದ ಬಗ್ಗೆ ಅರಿವು ಮೂಡಿಸುತ್ತಿರುವ ರೈತ ರವಿ ತೊರಗಲ್ ದೇಶಪಾಂಡೆ ಫೌಂಡೇಶನ್ ಸಹಕಾರದಲ್ಲಿ ಮತ್ತೋಂದು ಕೃಷಿಹೊಂಡ ನಿರ್ಮಿಸಿಕೊಳ್ಳುವ ಇಚ್ಚೆ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/05/2022 08:55 pm