ಹುಬ್ಬಳ್ಳಿ: ನಗರದಲ್ಲಿ ನಿನ್ನೆ ಸುರಿದ ಭಾರಿ ಮಳೆ ಗಾಳಿಯಿಂದ ಮನೆಯೊಂದರ ಮೇಲ್ಚಾವಣಿ ಕುಸಿದು ಎತ್ತು ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಮಂಟೂರು ಗ್ರಾಮದಲ್ಲಿ ನಡೆದಿದೆ.
ಮಂಟೂರು ಗ್ರಾಮದ ರೈತ ಕಲ್ಲಪ್ಪ ಹೊನ್ನಾಯ್ಯರ ಮನೆ ಮೇಲ್ಚಾವಣಿ ಕುಸಿದು ಬಿದ್ದು ಈ ಅವಘಡ ಸಂಭವಿಸಿದೆ. ಒಳಗೆ ಎರಡು ಎತ್ತುಗಳನ್ನು ಕಟ್ಟಿದ್ದ ಕಲ್ಲಪ್ಪ ಮೇಲ್ಚಾವಣಿ ಕುಸಿತಕ್ಕೆ ಒಂದು ಎತ್ತು ಸ್ಥಳದಲ್ಲೇ ಸಾವನ್ನಪ್ಪಿದೆ. ಘಟನಾ ಸ್ಥಳಕ್ಕೆ ಗ್ರಾಮದ ಜನ ಮತ್ತು ಗ್ರಾಮಾಂತರ ತಹಶೀಲ್ದಾರರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಗ್ರಾಮ ಲೆಕ್ಕಾಧಿಕಾರಿಗೆ ವರದಿ ಒಪ್ಪಿಸಲು ಹೇಳಿದ್ದಾರೆ.
Kshetra Samachara
26/04/2022 12:40 pm