ಕುಂದಗೋಳ : ಯುಗಾದಿ ಹಬ್ಬದ ಮುಗಿಯುತ್ತಿದ್ದಂತೆ ಹಸಿರು ನವ ಚಿಗರಿನ ನಡುವೆ ಭೂತಾಯಿಯ ಒಡಲು ಸಂಪೂರ್ಣ ಬರಿದಾಗಿದ್ದು ಹೊಸ ವರ್ಷದ ಮುಂಗಾರು ಬಿತ್ತನೆಗಾಗಿ ರೈತ ಭೂಮಿಯನ್ನು ಹದಗೊಳಿಸುವ ಕಾಯಕದಲ್ಲಿ ನಿರತನಾಗಿದ್ದಾನೆ.
ಕೃಷಿ ಕೆಲಸಕ್ಕೆ ಅನ್ನದಾತನಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿವ ಜಾನುವಾರುಗಳ ವರ್ಷದ ಗಂಜಿ ಅಂದ್ರೇ ಹೊಟ್ಟು, ಮೇವು ಶೇಖರಿಸಿಡುವ ಬಣವೆ ಒಟ್ಟುವ ಕಾಯಕ ಬಯಲು ಸೀಮೆಯಲ್ಲಿ ಜೋರಾಗಿ ನಡೆದಿದ್ದು, ರೈತಾಪಿ ಜನ ಆ ಕಾಯಕದಲ್ಲಿ ನಿರತರಾಗಿದ್ದಾರೆ.
ಕಳೆದ ವರ್ಷದ ಮುಂಗಾರು ಶೇಂಗಾ, ಹಿಂಗಾರು, ಕಡಲೆ, ಗೋಧಿ, ಜೋಳದ ಸೊಪ್ಪಿನ ಬಣವೆಯನ್ನು ತರಗಾರರಿಂದ ಅಚ್ಚುಕಟ್ಟಾಗಿ ನಿರ್ಮಿಸುವ ಕಾಯಕದಲ್ಲಿ ರೈತಾಪಿ ಕುಲ ತೊಡಗಿದೆ, ಈಗಾಗಲೇ ಎಲ್ಲೆಡೆ ಮಳೆರಾಯ ಸಿಡಿಲು,ಗುಡುಗು ಸಮೇತ ಸದ್ದು ಮಾಡುತ್ತಿದ್ದು ಮಳೆ ಬಿದ್ದು ಮುಂಗಾರು ಕಾಯಕ ಆರಂಭದ ಮುನ್ನವೇ ರೈತಾಪಿ ಕುಲ ಬಣವೆ ನಿರ್ಮಿಸುವ ಕೆಲಸವನ್ನು ಮುಗಿಸುತ್ತಿದ್ದಾರೆ.
Kshetra Samachara
21/04/2022 03:53 pm