ಅಣ್ಣಿಗೇರಿ: ಕೃಷಿ ಕಾಯಕದಲ್ಲಿ ಬೆಳಕು ಕಂಡ ಅದೆಷ್ಟೋ ದೊಡ್ಡ ದೊಡ್ಡ ರೈತರ ಸಾಲಿನಲ್ಲಿ ಸಣ್ಣ ಸಣ್ಣ ಜಮೀನನ್ನೂ ಹೊಂದಿದ ರೈತರು ಮಹದಾನಂದ ಅನುಭವಿಸಿ ವರ್ಷ ವರ್ಷ 2.50 ಲಕ್ಷ ಆದಾಯ ಕಂಡುಕೊಂಡಿದ್ದಾರೆ!
ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದ ರೈತ ಮಹಮ್ಮದ್ ರಫೀಕ್ ಹುಯಿಲಗೋಳ ತಾವು ಹೊಂದಿದ್ದು ಮೂರು ಎಕರೆ ಜಮೀನಾದರೂ, ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ 70*70 ಸುತ್ತಳತೆಯ ಕೃಷಿ ಹೊಂಡ ನಿರ್ಮಿಸಿಕೊಂಡು ಉತ್ತಮ ಆದಾಯ ಪಡೆದಿದ್ದಾರೆ.
ಕೃಷಿ ಹೊಂಡ ಆಶ್ರಿತವಾಗಿ ಮುಂಗಾರು ಹತ್ತಿ, ಗೋಧಿ ಹಿಂಗಾರು ಜೋಳ ಬೆಳೆದು ಉತ್ತಮ ಅಂದ್ರೆ ಮೂರು ಎಕರೆ ಜಮೀನಿನಲ್ಲಿ 2.50 ಲಕ್ಷ ರೂ. ಆದಾಯ ಪಡೆದಿದ್ದಾರೆ.
ಸದ್ಯ, ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ನಿರ್ಮಾಣವಾದ ಕೆರೆಗಳು ಹುದುಗಿ ಕೆರೆ ನಿರ್ವಹಣೆ ಜೊತೆಗೆ ಹೊಸ ಕೆರೆ ನಿರ್ಮಾಣಕ್ಕೂ ಹೆಚ್ಚಿನ ಸಹಾಯಹಸ್ತ ನೀಡುವಂತೆ ರೈತರು ದೇಶಪಾಂಡೆ ಫೌಂಡೇಶನ್ ಗೆ ಮೊರೆ ಹೋಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
31/03/2022 03:24 pm