ನವಲಗುಂದ: ಕೃಷಿ ಕ್ಷೇತ್ರದಲ್ಲಿ ಶ್ರೀಮಂತಿಕೆ ತಂದ, ರೈತ ಬೆಳೆಯುತ್ತಿದ್ದ ಒಣ ಬೇಸಾಯದಲ್ಲಿ ನೀರಾವರಿ ಮಾರ್ಗ ತಂದ, ಭೂತಾಯಿ ಮಡಿಲಲ್ಲಿ ಹೊಸ ಹೊಸ ಬೆಳೆ ಬೆಳೆಯುವ ಪ್ರಯೋಗಕ್ಕೆ ಸಾಕ್ಷಿಯಾದ ದೇಶಪಾಂಡೆ ಫೌಂಡೇಶನ್ ಸಹಕಾರದ ಕೃಷಿಹೊಂಡ ಈಗಾಗಲೇ ಅದೆಷ್ಟೋ ರೈತರು ಬಾಳಿಗೆ ವರವಾಗಿದೆ.
ಭೂತಾಯಿಯ ಮಕ್ಕಳ ಪಾಲಿಗೆ ಕೃಷಿಹೊಂಡ ಉತ್ತಮ ಫಸಲಿನ ಜೊತೆ ಮಳೆ ಹೋದರೂ ಧೈರ್ಯದಿಂದ ಒಂದು ಬೆಳೆಯನ್ನು ಉತ್ತಮವಾಗಿ ತೆಗೆಯಬಲ್ಲ ಆತ್ಮವಿಶ್ವಾಸ ಮೂಡಿಸಿದೆ.
ಅಂತಹ ದೃಢವಿಶ್ವಾಸದಿಂದ ನವಲಗುಂದ ತಾಲೂಕಿನ ಇಬ್ರಾಹಿಂಪುರದ ಪ್ರಗತಿಪರ ರೈತ ಚನ್ನಪ್ಪ ಸಿದ್ಧಪ್ಪ ಹಾಲವರ, ತಮ್ಮ 20 ಎಕರೆ ಕೃಷಿ ಜಮೀನಿಗೆ ಕೃಷಿಹೊಂಡ ಬೇಕು ಎನ್ನುತ್ತಿದ್ದಾರೆ. ಅವರೊಂದಿಗೆ 'ಪಬ್ಲಿಕ್ ನೆಕ್ಸ್ಟ್' ನಡೆಸಿದ ಚಿಟ್ ಚಾಟ್ ಇಲ್ಲಿದೆ...
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/03/2022 07:34 am