ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಆರು ವರ್ಷದ ಕೃಷಿಹೊಂಡದ ಬೇಸಾಯ, ಪ್ರತಿ ವರ್ಷ 4 ಲಕ್ಷ ಆದಾಯ

ಅಣ್ಣಿಗೇರಿ : ಇಲ್ಲೊಬ್ಬ ರೈತ ಕಳೆದ ಆರು ವರ್ಷಗಳಿಂದ ಕೃಷಿಹೊಂಡದ ಆಶ್ರಿತ ಕೃಷಿ ಬದುಕಿನಲ್ಲಿ ಪ್ರತಿ ವರ್ಷವೂ ಅತ್ಯುತ್ತಮ ಆದಾಯ ಅಂದ್ರೇ, ವಾರ್ಷಿಕ ನಾಲ್ಕು ಲಕ್ಷ ರೂಪಾಯಿಯನ್ನು ಗಳಿಸುತ್ತಾ ಮುನ್ನಡೆದಿದ್ದಾರೆ.

ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದ ಪ್ರಗತಿಪರ ರೈತ ಈರಪ್ಪ ಸಂಗಪ್ಪ ಚವಡಿ ಎಂಬುವವರೇ, ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ 100*100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಮುಂಗಾರು ಮೆಣಸಿನಕಾಯಿ, ಉತ್ತಮ ಲಾಭದ ಬಿಟಿ ಹತ್ತಿ ಜೊತೆಗೆ ಹಿಂಗಾರು ಕಡಲೆ, ಗೋಧಿ, ಕುಸುಬೆ, ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ.

ಕಳೆದ ಆರು ವರ್ಷಗಳಿಂದ ಕೃಷಿಹೊಂಡ ಆಶ್ರಿತ ಬೇಸಾಯ ಆರಂಭಿಸಿದ ಈರಪ್ಪ, ಉತ್ತಮ ಬೆಳೆ ಲಾಭದ ಜೊತೆಗೆ ಬದು ನಿರ್ಮಾಣ, ಮಣ್ಣಿನ ಸವಕಳಿ, ಹೊಲ ಸಮತಟ್ಟಾಗಲೂ ಕೃಷಿಹೊಂಡ ನಿರ್ಮಿಸಿ, ಮಳೆ ಸಮರ್ಪಕವಾಗದ ದಿನದಲ್ಲೂ ಕೃಷಿ ಹೊಂಡದ ಕೃಷಿ ಕೈಗೊಂಡು ಲಾಭ ಗಳಿಸಿದ್ದಾರೆ.

ತಮ್ಮ 4 ಎಕರೆ 16 ಗುಂಟೆ ಜಮೀನಿನಲ್ಲಿ ದೇಶಪಾಂಡೆ ಫೌಂಡೇಶನ್ ಸಹಕಾರದ ಕೃಷಿಹೊಂಡದಿಂದ ಗರಿಷ್ಠ ಆದಾಯದ ಕೃಷಿ ಕಾಯಕ ಮೆಚ್ಚಿದ ರೈತ ಈರಪ್ಪ, ಅದೆಷ್ಟೋ ರೈತರಿಗೆ ಪ್ರೇರಣೆಯಾಗಿದ್ದಾರೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/03/2022 03:45 pm

Cinque Terre

140.55 K

Cinque Terre

1

ಸಂಬಂಧಿತ ಸುದ್ದಿ