ಅಣ್ಣಿಗೇರಿ : ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡದ ಕೃಷಿಯ ಮೂಲಕ ಇಲ್ಲೊಬ್ಬ ರೈತ ವಾರ್ಷಿಕ ನಾಲ್ಕು ಲಕ್ಷ ಆದಾಯ ಗಳಿಸಿದ್ದಾರೆ. ಅದು ಕೇವಲ 2 ಎಕರೆ 4 ಗುಂಟೆ ಜಮೀನಿನಲ್ಲಿ ಅಂದ್ರೇ ನೀವು ನಂಬಲೇಬೇಕು.
ಇಂತಹ ಶ್ರಮದ ಸಾಧನೆ ಮಾಡಿದವರೇ ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದ ಪ್ರಗತಿಪರ ರೈತ ರೆಹಮಾನಸಾಬ್ ಅದರಗುಂಚಿ.
ಬಸಾಪೂರ ಗ್ರಾಮದ ತಮ್ಮ 2 ಎಕರೆ 4 ಗುಂಟೆ ಜಮೀನಿನಲ್ಲಿ ದೇಶಪಾಂಡೆ ಫೌಂಡೇಶನ್ ಸಹಕಾರ ಪಡೆದು 70*70 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡ ರೆಹಮಾನಸಾಬ್ ಅತಿವೃಷ್ಟಿ ನಡುವೆ ಮುಂಗಾರು ಹೆಸರು, ಶೇಂಗಾ, ಹತ್ತಿ ಬೆಳೆ ಬೆಳೆದು ಅಲ್ಪ ಲಾಭ ಕಂಡುಕೊಂಡ ಇವರು ಹಿಂಗಾರು ಗೋಧಿ, ಜೋಳ, ಕುಸುಬೆ ಬೆಳೆದು ಉತ್ತಮ ಆದಾಯದ ನಿರೀಕ್ಷೆ ಹೊಂದಿದ್ದಾರೆ.
ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ಮಣ್ಣಿನ ಸವಕಳಿ, ಬದು ನಿರ್ಮಾಣಕ್ಕೂ ಸಹಕಾರಿಯಾಗಿ ರೈತ ರೆಹಮಾನಸಾಬ್ ಅದರಗುಂಚಿ ಬಾಳಲ್ಲಿ ಪರಿಶ್ರಮಕ್ಕೆ ತಕ್ಕ ಫಲ ನೀಡಿದೆ.
Kshetra Samachara
14/03/2022 03:42 pm